ಹುಟ್ಟುವ ಮಗು ಗಂಡೋ? ಹೆಣ್ಣೋ? ತಿಳಿಯಲು ಗರ್ಭಿಣಿ ಪತ್ನಿಯ ಉದರ ಸೀಳಿದ ಪಾಪಿ ಪತಿ!

UP
Published on

ಲಖನೌ: ತನಗೆ ಹುಟ್ಟುವ ಮಗು ಗಂಡೋ? ಅಥವಾ ಹೆಣ್ಣೋ? ಎಂದು ತಿಳಿಯಲು ಐದು ಹೆಣ್ಣುಮಕ್ಕಳ ತಂದೆಯೊಬ್ಬ ಗರ್ಭಿಣಿ ಪತ್ನಿಯ ಉದರ ಸೀಳಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಬುಡಾನ್​ ಜಿಲ್ಲೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಪತಿಯ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮಂದುವರಿದಿದೆ. ಆರೋಪಿ ಪತಿಯನ್ನು ಪನ್ನಲಾಲ್​ ಎಂದು ಗುರುತಿಸಲಾಗಿದೆ. ಈತ ಸಿವಿಲ್​ ಲೈನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ನೇಕ್​ಪುರ್​ ನಿವಾಸಿಯಾಗಿದ್ದು, 35 ವರ್ಷದ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಚೂಪಾದ ಸಾಧನದಿಂದ ಸೀಳಿದ್ದಾನೆಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎಫ್​ಐಆರ್​ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ಕುಟುಂಬದ ಮೂಲಗಳು ಹೇಳುವ ಪ್ರಕಾರ, ಪನ್ನಲಾಲ್​ಗೆ ಈಗಾಗಲೇ ಐದು ಹೆಣ್ಣು ಮಕ್ಕಳಿದ್ದು, ಗಂಡು ಮಗು ಆಗಬೇಕೆಂಬ ಬಯಕೆ ಇತ್ತಂತೆ. ಹೀಗಾಗಿ ಭ್ರೂಣದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳು ಉದರ ಸೀಳಿದ್ದಾನೆಂದು ಆರೋಪಿಸಿದ್ದಾರೆ.

ಸಂತ್ರಸ್ತ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದಿರುವ ಪೊಲೀಸ್​ ಅಧಿಕಾರಿಗಳು ತನಿಖೆ ಮುಂದುವರಿಸಿದ್ದೇವೆಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net