

ಬೆಂಗಳೂರು: ನಟಿ ಅದಿತಿ ಪ್ರಭುದೇವ ಇದೀಗ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಶ್ರೀನಿ ನಾಯಕತ್ವದ ಮತ್ತು ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದ ಚಿತ್ರೀಕರಣದಲ್ಲಿ ಅದಿತಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿಯೇ ಅವರಿಗೆ ವಿಶೇಷ ಅತಿಥಿಯೊಬ್ಬರು ಸಿಕ್ಕಿದ್ದಾರೆ. ಅವರ ಹಾಡುಗಾರಿಕೆ ಕಂಡು ಅದಿತಿ ಫಿದಾ ಆಗಿದ್ದಾರೆ.
ನಗುವ ನಯನ ಮಧುರ ಮೌನ.. ಹಾಡನ್ನು ಹಾಡಿದ ಪರಿ ಕಂಡು ಅಚ್ಚರಿಗೊಳಗಾದ ಅದಿತಿ, ಅಂಧ ಗಾಯಕನ ಜತೆಗೆ ತಾವೈ ದನಿ ಗೂಡಿಸಿದ್ದಾರೆ. ಆತನ ಗಾಯನವನ್ನು ಆನಂದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ ಗಾಯಕನ ಕುರಿತು ಒಂದಷ್ಟು ಸಾಲೂಗಳನ್ನೂ ಬರೆದುಕೊಂಡಿದ್ದಾರೆ.
'ಪ್ರತಿಭೆ ಯಾರ ಆಸ್ತಿಯೂ ಅಲ್ಲ. ಚಿಕ್ಕಪುಟ್ಟ ಸಮಸ್ಯೆಗಳಿಗೆ ಧೃತಿಗೆಡುವ ಅದೆಷ್ಟೊ ಮನಸುಗಳ ಮಧ್ಯೆ ದೇವರು ಕೊಟ್ಟ ಈ ಜನ್ಮವನ್ನು ಸಂತೋಷದಿಂದ ಕಳೆಯುತ್ತಿರುವ ಇಂತಹವರು ಸ್ಪೂರ್ತಿ ಎನಿಸುತ್ತಾರೆ. Infact, he made my day . ಓಲ್ಡ್ ಮಾಂಕ್ ಚಿತ್ರೀಕರಣದ ವೇಳೆ ಸಿಕ್ಕ ಗೆಳೆಯನಿಗೆ ಮನದುಂಬಿದ ಹಾರೈಕೆಗಳು ನಿನ್ನ ನಗು ಎಂದೂ ಮಾಸದಿರಲಿ' ಎಂದು ಬರೆದುಕೊಂಡಿದ್ದಾರೆ.