ಹಿಂದು ಯುವತಿಯನ್ನು ಅಪಹರಿಸಿ ಮದುವೆಯಾದ 5 ಪತ್ನಿಯರ ಗಂಡ! ಈತನ ಮೇಲಿದೆ ಮತಾಂತರದ ಆರೋಪ

Marriage
Published on

ಉತ್ತರ ಪ್ರದೇಶ: ಐವರು ಪತ್ನಿಯರ ಗಂಡ, ಇದೀಗ 19 ವರ್ಷದ ಹಿಂದು ಯುವತಿಯನ್ನು ಅಪಹರಿಸಿ ಮದುವೆಯಾಗಿದ್ದಾನೆ. ಈ ಆಘಾತಕಾರಿ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿವಿಧ ಹಿಂದುಪರ ಸಂಘಟನೆ ಹಾಗೂ ಭಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ, ಆರೋಪಿ ರಶೀದ್ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪಿ ರಶೀದ್ ಹಿಂದು ಯುವತಿಯನ್ನು ಅಪಹರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ವಿವಾಹವಾಗಿದ್ದಾನೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ, ಸಂತ್ರಸ್ತ ಯುವತಿಯ ಮನೆಗೆ ಕರೆ ಮಾಡಿ, 'ಎಫ್‌ಐಆರ್‌ ಹಿಂತೆಗೆದುಕೊಳ್ಳದಿದ್ದರೆ ನಿಮ್ಮ ಇನ್ನೊಬ್ಬ ಮಗಳನ್ನೂ ಅಪಹರಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ಹಿಂದು ಯುವತಿ ಇನ್ನೂ ಕೂಡ ಆರೋಪಿ ವಶದಲ್ಲೇ ಇದ್ದಾಳೆ. ಜೂನ್ 22ರ ಒಳಗಾಗಿ ಯುವತಿಯನ್ನು ಪೊಲೀಸರು ಪತ್ತೆ ಮಾಡಿ, ರಕ್ಷಿಸದೇ ಹೋದಲ್ಲಿ ಇಡೀ ಗ್ರಾಮದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಯುವತಿ!

ಶಾಮ್ಲಿ ಜಿಲ್ಲೆಯ ಆದಂಪುರ ಗ್ರಾಮದ ನಿವಾಸಿ 19 ವರ್ಷದ ಯುವತಿ ಸನೌಲಿ ನಾಗ್ಲಾ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬ ಆಮಿಷವೊಡ್ಡಿ ಅಪಹರಿಸಿದ್ದಾನೆ. ಬಳಿಕ ಸಂಬಂಧಿಕರು ನಾಪತ್ತೆಯಾದ ಬಗ್ಗೆ ಛಪ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ವರದಿಯಾಗಿದೆ.

ಆರೋಪಿಯ 5 ಮಂದಿ ಪತ್ನಿಯರಲ್ಲಿ ನಾಲ್ವರು ಹಿಂದುಗಳು!

ಆರೋಪಿ ರಶೀದ್​ ಐದು ಮದೆಯಾಗಿದ್ದು, ಐವರು ಪತ್ನಿಯರಲ್ಲಿ ಒಬ್ಬರು ಮಾತ್ರ ಮುಸ್ಲಿಂ ಧರ್ಮಕ್ಕೆ ಸೇರಿದ್ದಾರೆ. ಉಳಿದ ನಾಲ್ವರು ಹಿಂದು ಧರ್ಮಕ್ಕೆ ಸೇರಿದ್ದಾರೆ. ಈತ ಉದ್ದೇಶಪೂರ್ವಕವಾಗಿ ಹಿಂದು ಮಹಿಳೆಯರನ್ನು ಮತಾಂತರ ಮಾಡಿ ವಿವಾಹವಾಗುತ್ತಾನೆ ಎಂದು ಪ್ರತಿಭಟನೆ ವೇಳೆ ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿಸಿರುವುದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net