

ಉತ್ತರಪ್ರದೇಶ: ಪೊಲೀಸರು ಸಾಮಾನ್ಯವಾಗಿ ಹಾದಿ ಬೀದಿಯಲ್ಲಿ ನಡೆಯುವ ಪುಂಡರ ಜಗಳವನ್ನ ಬಿಡಿಸುತ್ತಾರೆ. ಆದ್ರೆ ಇದೀಗ ಪೊಲೀಸರು ಹರಸಾಹಸ ಪಟ್ಟಿರೋದು ಪುಂಡರ ಜಗಳ ಬಿಡಿಸಲು ಅಲ್ಲ. ಬದಲಾಗಿ ಬೀದಿಯಲ್ಲಿ ಜಗಳವಾಡುತ್ತಿದ್ದ ಘಟಾನುಘಟಿ ಗೂಳಿಗಳನ್ನ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಎರಡು ದಾರಿತಪ್ಪಿ ಹೋರಿಗಳು ತಮ್ಮ ಕೊಂಬುಗಳು ಒಂದಕ್ಕೊಂದು ಸಿಲುಕಿಸಿಕೊಂಡ ಕಾರಣ ಜಗಳವಾಡ ತೊಡಗಿದೆ. ಎರಡೂ ಗೂಳಿಗಳು ಕಾಳಗದಲ್ಲಿ ತೊಡಗಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸ್ ಬ್ಯಾರಿಕೇಡ್ ಬಳಸಿ ಅವುಗಳನ್ನು ಬೇರ್ಪಡಿಸಲು ಪ್ರಯತ್ನಿಸಿದ್ದು, ಪ್ರಾಣಿಗಳ ಕೋಪವನ್ನು ಎದುರಿಸಬೇಕಾಯಿತು.
ಓಡಿಹೋದ ಪೊಲೀಸರ ಮೇಲೆ ಗೂಳಿಯೊಂದು ದಾಳಿ ಮಾಡಿದ್ದು, ಮಾರಣಾಂತಿಕ ದಾಳಿಯಿಂದ ಸ್ವಲ್ಪದರಲ್ಲೇ ಪೊಲೀಸರು ಪಾರಾಗಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರಲ್ ಆಗಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಈ ವಿಡಿಯೋ ವೀಕ್ಷಿದ ನೆಟ್ಟಿಗರ ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ಇಷ್ಟು ದಿನ ಪುಂಡರ ಜಗಳ ಬಿಡಿಸುತ್ತಿದ ಪೊಲೀಸರು ಈಗ ಜಾನುವಾರುಗಳ ಬೀದಿ ಜಗಳ ಬಿಡಿಸುವಂತಾಗಿದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.