ಅಯೋಧ್ಯೆಯಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ದೇವಾಲಯಗಳ ಮ್ಯೂಸಿಯಂ ನಿರ್ಮಿಸಲು ಮುಂದಾದ ಟಾಟಾ ಸನ್ಸ್!

Temple Museum
Published on

ನವದೆಹಲಿ: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ನಿತ್ಯವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಅಯೋಧ್ಯೆಯಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ವಸ್ತು ಸಂಗ್ರಹಾಲಯ ಆರಂಭಿಸಲು ನಿರ್ಧರಿಸಲಾಗಿದೆ.

ಈ ಮ್ಯೂಸಿಯಂ ನಿರ್ಮಿಸುವ ಬಗ್ಗೆ ಟಾಟಾ ಸನ್ಸ್ ಪ್ರಸ್ತಾವನೆಗೆ ಉತ್ತರ ಪ್ರದೇಶ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಇದಕ್ಕಾಗಿ ಅಗತ್ಯವಾದ ಜಾಗವನ್ನು 1 ರೂ. ಶುಲ್ಕಕ್ಕೆ 90 ವರ್ಷಗಳ ಕಾಲ ಟಾಟಾ ಸನ್ಸ್‌ಗೆ ಗುತ್ತಿಗೆ ನೀಡಲಾಗುವುದು.

ಭಾರತದಲ್ಲಿರುವ ಪ್ರಮುಖ ದೇಗುಲಗಳ ಬಗ್ಗೆ ಮಾಹಿತಿ ನೀಡಲು ಮತ್ತು ಸನಾತನ ಧರ್ಮದ ಬಗ್ಗೆ ಪ್ರಚಾರಕ್ಕಾಗಿ ಈ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ.

650 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇಗುಲಗಳ ವಸ್ತು ಸಂಗ್ರಹಾಲಯವು ಪ್ರಮುಖವಾಗಿ 12 ಗ್ಯಾಲರಿಗಳನ್ನು ಒಳಗೊಂಡಂತೆ ವಿನ್ಯಾಸ ಮಾಡಲಾಗುವುದು. 12 ಗ್ಯಾಲರಿಗಳ ಹೊರತಾಗಿ, ವಸ್ತುಸಂಗ್ರಹಾಲಯವು ಸುಂದರವಾದ ಉದ್ಯಾನವನ, ಕೆಫೆಟೇರಿಯಾ, ಕೊಳ ಮತ್ತು ನೆಲಮಾಳಿಗೆಯ ಪಾರ್ಕಿಂಗ್‌ ಅನ್ನು ಸಹ ಒಳಗೊಂಡಿರಲಿದೆ

ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವಿರ್ ಸಿಂಗ್ ಅವರು ಮ್ಯೂಸಿಯಂ ಉಪಕ್ರಮದ ಮಹತ್ವವನ್ನು ಒತ್ತಿ ಹೇಳಿದರು. ಪ್ರವಾಸೋದ್ಯಮ ಇಲಾಖೆಯು ವಸ್ತುಸಂಗ್ರಹಾಲಯಕ್ಕೆ 90 ವರ್ಷಗಳ ಗುತ್ತಿಗೆಗೆ 1 ರೂಪಾಯಿ ಟೋಕನ್ ಮೊತ್ತಕ್ಕೆ ಭೂಮಿಯನ್ನು ನೀಡುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net