ಪ್ರಕಟವಾಗದ 545 ಪಿಎಸ್‌ಐ ಹುದ್ದೆಗಳ ಫಲಿತಾಂಶ

PSI
Published on

ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಲು ಕನಸುಕಟ್ಟಿ 545 ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆದಿರುವ ಸಾವಿರಾರು ಅಭ್ಯರ್ಥಿಗಳು ಲಿತಾಂಶಕ್ಕಾಗಿ ಜಪಿಸುತ್ತಿದ್ದಾರೆ. ಮತ್ತೊಂದೆಡೆ 402 ಎಸ್‌ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಲ್ಲೂ ಆತಂಕ ಮೂಡಿದೆ.

545 ಎಸ್‌ಐ ನೇಮಕಾತಿ ಬಯಸಿರುವ ಕೆಲ ಅಭ್ಯರ್ಥಿಗಳು ಮದುವೆ, ಖಾಸಗಿ ನೌಕರಿ ಮುಂದೂಡಿ ಕಾಯುತ್ತಿದ್ದಾರೆ. ಪಾಲಕರು ಪುತ್ರ/ಪುತ್ರಿ ಖಾಕಿ ಧರಿಸುವುದನ್ನು ಕಣ್ಣಾರೆ ನೋಡಬೇಕೆಂಬ ಕನಸುಕಟ್ಟಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರ ನೇಮಕಾತಿಗೆ ಅರ್ಜಿ ಕರೆದು 3 ವರ್ಷ ತುಂಬಿದ್ದು, ಮರು ಪರೀಕ್ಷೆ ಮುಗಿದು ನಾಲ್ಕೈದು ತಿಂಗಳೇ ಕಳೆದಿದೆ. ಸರ್ಕಾರ ಕಲ್ಯಾಣ ಕರ್ನಾಟಕ ಮೀಸಲಾತಿ ಸ್ಪಷ್ಟತೆ ಕಂಡುಕೊಳ್ಳುವಲ್ಲಿ ವಿಲವಾಗಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿದೆ.

ಎಸ್‌ಐ ನೇಮಕಾತಿಗೆ 2020ರಲ್ಲಿ ಅರ್ಜಿ ಕರೆದು ಕೊನೆಗೆ ಹಗರಣದಲ್ಲಿ ಸಿಲುಕಿ ಹೈಕೋರ್ಟ್ ತೀರ್ಪಿನಂತೆ ಜನವರಿಯಲ್ಲಿ ಮರು ಪರೀಕ್ಷೆ ನಡೆಸಿದೆ. ಇನ್ನೇನು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸ ಬೇಕೆಂದುಕೋಳ್ಳುವಷ್ಟರಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು 2023ರ ಹೊರಡಿಸಿರುವ ಸುತ್ತೋಲೆಯಿಂದ ಗೊಂದಲ ಉಂಟಾಗಿ ಆಯ್ಕೆ ಪಟ್ಟಿ ಪ್ರಕಟಿಸಲು ಗೃಹ ಇಲಾಖೆ ತಿಣುಕಾಡುತ್ತಿದೆ. 545 ಮತ್ತು 402 ಎಸ್‌ಐ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದರೂ ಒಮ್ಮೆಯೇ ದೇಹದಾರ್ಢ್ಯ ಪರೀಕ್ಷೆ ನಡೆಸಿ ಅರ್ಹತ ಪ್ರಮಾಣಪತ್ರ ನೀಡಲಾಗಿದೆ. ಆದರಿಂದ 545 ಎಸ್‌ಐ ನೇಮಕಾತಿ ಪೂರ್ಣವಾದ ಮೇಲೆಯೇ 402 ಪ್ರಕಟಿಸಬೇಕಾಗಿದೆ.

ಆದರಿಂದ 3-4 ವರ್ಷದಿಂದ ಎಸ್‌ಐ ನೇಮಕಾತಿ ನಡೆಯದೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ತಾತ್ಕಾಲಿಕವಾಗಿ ಪಿಎಸ್‌ಐಗೆ ಬಡ್ತಿ ಕೊಡಲಾಯಿತು. ಆದರೂ ನಿವೃತ್ತಿ ಹಂಚಿನಲ್ಲಿದ್ದ ಕಾರಣ ಪ್ರತಿ ತಿಂಗಳು ನಿವೃತ್ತಿ ಪಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ಪಿಎಸ್‌ಐ ಕೊರತೆ ದೊಡ್ಡ ತಲೆನೋವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net