VIDEO | 'ಠಾಣೆಗೆ ಕರೆದೊಯ್ದು ಹೊಡೆಯುವ ಅಧಿಕಾರ ಕೊಟ್ಟಿದ್ಯಾರು'?; ಇನ್ಸ್‌ಪೆಕ್ಟರ್‌ಗೆ ಚಳಿ ಬಿಡಿಸಿದ ಪ್ರಲ್ಹಾದ್​ ಜೋಶಿ

Untitled-design-25-1
Published on

ಧಾರವಾಡ: ವ್ಯಕ್ತಿಯೊಬ್ಬನನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ಹೊಡೆದ ಪೊಲೀಸ್​ ಅಧಿಕಾರಿಯನ್ನು ಮನೆಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಠಾಣೆಗೆ ಕರೆದೊಯ್ದು ಹೊಡೆಯುವ ಅಧಿಕಾರವನ್ನು ನಿಮಗೆ ಕೊಟ್ಟಿದ್ಯಾರು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ವ್ಯಕ್ತಿಯನ್ನು ಠಾಣೆಗೆ ಕರೆತಂದು ಹೊಡೆದ ಧಾರವಾಡದ ಶಹರ ಠಾಣಾ ಪೊಲೀಸ್​ ಅಧಿಕಾರಿ ಕಾಡದೇವರಮಠಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ಸಚಿವ ಪ್ರಲ್ಹಾದ್​ ಜೋಶಿ, "ಹೊಡೆಯಲು ನಿಮಗೆ ಏನು ಅಧಿಕಾರಿಯಿದೆ. ಒಬ್ಬ ವ್ಯಕ್ತಿಯನ್ನು ಹೊಡೆಯುವ ಅಧಿಕಾರ ಕೊಟ್ಟಿದ್ಯಾರು? ಬಿಜೆಪಿಯವನು ಎಂದು ಅವನಿಗೆ ಈ ರೀತಿ ಮಾಡಿದ್ದೀರಾ? ಕಾಂಗ್ರೆಸ್​ ಅಧಿಕಾರದಲ್ಲಿದೆ ಎಂದು ಬಿಜೆಪಿಯವರ ಮೇಲೆ ದಬ್ಬಾಳಿಕೆ ಮಾಡಬಹುದು ಅಂದುಕೊಂಡಿದ್ದೀರಾ?" ಎಂದು ಹೇಳಿದರು.

"ನೀವು ಡ್ಯೂಟಿಯಲ್ಲಿ ಇದ್ದೀರಾ, ಈಗ ನಾನು ನಿಮಗೆ ಹೊಡೆದರೆ ಹೇಗೆ? ಕಾನೂನು ಪ್ರಕಾರ ಅದಕ್ಕೆ ಅನುಮತಿ ಇದ್ಯಾ? ಮತ್ತೆ ಯಾವ ಆಧಾರದ ಮೇಲೆ ನೀವು ಹೊಡೆಯುತ್ತೀರಿ. ನಾನು ಕೇಂದ್ರ ಮಂತ್ರಿಯಾದರು ಸಹಿತ ನಿಮ್ಮ ಕಛೇರಿ ಮುಂದೆ ಬಂದು ಧರಣಿ ನಡೆಸುತ್ತೀನಿ" ಎಂದರು. ಘಟನೆಯ ಪೂರ್ತಿ ವಿವರ ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net