More

    ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಪ್ರಧಾನಿ ಮೋದಿ

    ನವದೆಹಲಿ: ಹಿಮಾಲಯದ ರೀತಿ ಎಲ್ಲಿಯವರೆಗೆ ನಮ್ಮ ಯೋಧರು ದೃಢವಾಗಿ ನಿಂತಿರುತ್ತಾರೋ ಅಲ್ಲಿಯವರೆಗೆ ನಮ್ಮ ಭಾರತ ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರ ಸೇವೆಯನ್ನು ನೆನೆದರು.

    ಇಂದು (ನ.12) ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೇನಾ ಸಮವಸ್ತ್ರದಲ್ಲಿ ಸಿಹಿ ಹಂಚಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಗಡಿಯಲ್ಲಿ ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ನಮ್ಮ ದೇಶ ಸುರಕ್ಷಿತವಾಗಿರುತ್ತದೆ ಎಂದ ಪ್ರಧಾನಿ ಮೋದಿ, ಪ್ರಪಂಚದಾದ್ಯಂತದ ಘರ್ಷಣೆಗಳ ನಡುವೆ ಗಡಿಗಳನ್ನು ಭದ್ರಪಡಿಸುವಲ್ಲಿ ಸೇನೆಯ ಪಾತ್ರವನ್ನು ಶ್ಲಾಘಿಸಿದರು.

    ಇಂದಿನ ಪ್ರಪಂಚದ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತದಿಂದ ನಿರೀಕ್ಷೆಗಳು ನಿರಂತರವಾಗಿ ಹೆಚ್ಚುತ್ತಲ್ಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ, ಭಾರತದ ಗಡಿಗಳು ಸುರಕ್ಷಿತವಾಗಿರುವುದು ಮುಖ್ಯವಾಗಿದೆ. ನಾವು ದೇಶದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸುತ್ತಿದ್ದೇವೆ ಮತ್ತು ಇದರಲ್ಲಿ ನಿಮ್ಮ ಪಾತ್ರ ದೊಡ್ಡದಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ನಿರಂತರವಾಗಿ ಕೊಡುಗೆ ನೀಡುತ್ತಿವೆ ಎಂದು ಹೊಗಳಿದರು.

    ಇದೇ ಸಂದರ್ಭದಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸುವ ತಮ್ಮ ಸಂಪ್ರದಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಕಳೆದ 30 ರಿಂದ 35 ವರ್ಷಗಳಿಂದ ದೀಪಾವಳಿಯನ್ನು ಆಚರಿಸುತ್ತಾ ಬರುತ್ತಿರುವುದಾಗಿ ತಿಳಿಸಿದರು. ಗುಜರಾತ್‌ನ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವುದಕ್ಕಿಂತ ಮುಂಚಿನಿಂದಲೂ ಈ ಆಚರಣೆ ಮಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.

    ದೀಪಾವಳಿ ಸಂದರ್ಭದಲ್ಲಿ ಕುಟುಂಬದಿಂದ ದೂರವಿದ್ದು, ಹಬ್ಬ ಆಚರಣೆ ಮಾಡಿದ ಸೈನಿಕರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಕುಟುಂಬ ಇರುವಲ್ಲಿ ಮಾತ್ರ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇಂದು ನೀವು ಕುಟುಂಬದಿಂದ ದೂರವಿದ್ದು, ಗಡಿಯಲ್ಲಿ ಠಿಕಾಣಿ ಹೂಡಿದ್ದೀರಿ. ಇದು ಕರ್ತವ್ಯದ ಮೇಲಿನ ನಿಮ್ಮ ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ. ಭದ್ರತಾ ಪಡೆಗಳನ್ನು ನಿಯೋಜಿಸುವ ಸ್ಥಳವು ದೇವಾಲಯಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.

    ಭಾರತವು ಈಗ ರಕ್ಷಣಾ ವಲಯದಲ್ಲಿ ಜಾಗತಿಕ ನಿರ್ಣಾಯಕನಾಗಿ ಹೊರಹೊಮ್ಮುತ್ತಿದೆ ಮತ್ತು ದೇಶದ ರಕ್ಷಣಾ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ, ಸ್ನೇಹಪರ ರಾಷ್ಟ್ರಗಳ ಅಗತ್ಯಗಳನ್ನೂ ಪೂರೈಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2016ರ ದೀಪಾವಳಿ ಮತ್ತು ಈ ವರ್ಷದ ನಡುವೆ, ಭಾರತದ ರಕ್ಷಣಾ ರಫ್ತು ಎಂಟು ಪಟ್ಟು ಹೆಚ್ಚಾಗಿದೆ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯು ಈಗ 1 ಲಕ್ಷ ಕೋಟಿ ರೂ. ತಲುಪಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಹಿಮಾಚಲದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ- ಅಲ್ಲಿನ ಉಷ್ಣಾಂಶ ಕೇಳಿದ್ರೆ ನಡುಕ ಗ್ಯಾರಂಟಿ…

    ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts