ನಿರುದ್ಯೋಗ ಶೇ. 6.4ಕ್ಕೆ ಇಳಿಕೆ

ವಿಜಯವಾಣಿ (6)
Published on

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಹದಿನೈದು ವರ್ಷಕ್ಕಿಂತ ಮೇಲಿನವರ ನಿರುದ್ಯೋಗ ಪ್ರಮಾಣ ಶೇ. 6.4ಕ್ಕೆ ಇಳಿದಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್​ಎಸ್​ಎಸ್​ಒ) ತಿಳಿಸಿದೆ.

2023-24ರ ಆರ್ಥಿಕ ವರ್ಷದ ಡಿಸೆಂಬರ್ ತ್ರೖೆಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ. 6.5ರಷ್ಟಿತ್ತು. 2024-25ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ಇದು 6.4ರಷ್ಟಿತ್ತು ಎಂದು ಎನ್​ಎಸ್​ಎಸ್​ಒ ನಡೆಸಿದ 25ನೇ ಆವರ್ತಕ ಕಾರ್ವಿುಕ ಸಂಖ್ಯೆ ಸಮೀಕ್ಷೆ ಹೇಳಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ನಗರ ಪ್ರದೇಶದ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ 2024ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೖೆಮಾಸಿಕದಲ್ಲಿ ಶೇ. 8.1ಕ್ಕೆ ಇಳಿದಿದೆ.

ಅದರ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ. 8.6ರಷ್ಟಿತ್ತು. 2024ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಇದು ಶೇ. 8.4ರಷ್ಟಿತ್ತು. ನಗರ ಪ್ರದೇಶಗಳ ಪುರುಷರಲ್ಲಿ 2024ರ ಅಕ್ಟೋಬರ್ ನಿಂದ ಡಿಸೆಂಬರ್​ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ. 5.8ರಷ್ಟಿತ್ತು. 2024ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಇದು ಶೇ. 5.7ರಷ್ಟಿತ್ತು ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net