

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ತಮ್ಮ ನೂರಾ ಎಂಬಾತನ ಮಗ ಸೊಹೈಲ್ ಕಸ್ಕರ್ ಅಮೆರಿಕದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.
ನಾರ್ಕೆ ಟೆರರ್ ಕೇಸ್ ಸಂಬಂಧಿಸಿ ಅಮೆರಿಕದ ಭದ್ರತಾ ಏಜೆನ್ಸಿಗಳ ಕಸ್ಟಡಿಯಲ್ಲಿದ್ದ ಸೊಹೈಲ್ ಕಸ್ಕರ್ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಭಾರತ ಸರ್ಕಾರ ಮಾಡಿತ್ತು. ಮುಂಬೈ ಪೊಲೀಸರು ಈ ನಿಟ್ಟಿನಲ್ಲಿ ಅಮೆರಿಕದ ಭದ್ರತಾ ಏಜೆನ್ಸಿಗಳ ಜತೆಗೆ ಸಂಪರ್ಕದಲ್ಲಿದ್ದರು. ಆದಾಗ್ಯೂ, ಆತ ಅಲ್ಲಿಂದ ಯಾವ ರೀತಿ ಪರಾರಿಯಾದ ಎಂಬ ಅಂಶ ಬೆಳಕಿಗೆ ಬಂದಿಲ್ಲ.
ದುಬೈ ಮೂಲಕ ಪಾಕಿಸ್ತಾನ ತಲುಪಿದ್ದು ಖಚಿತವಾಗಿದೆ. ಇತ್ತೀಚೆಗೆ ಆತನ ಧ್ವನಿ ಇಂಟರ್ಸೆಪ್ಟರ್ ಮೂಲಕ ಭದ್ರತಾಪಡೆಗಳಿಗೆ ಸಿಕ್ಕಿದ್ದು, ಅದು ಪಾಕಿಸ್ತಾನದಿಂದ ಹೊರಟ ತರಂಗಾಂತರದಲ್ಲಿತ್ತು ಎಂಬುದು ಖಚಿತವಾಗಿದೆ. ಸೊಹೈಲ್ ಕಸ್ಕರ್ ಅನ್ನು ನಾರ್ಕೆ ಟೆರರಿಸಂ ಕೇಸ್ನಲ್ಲಿ 2014ರಲ್ಲಿ ಸ್ಪೇನ್ನಲ್ಲಿ ಬಂಧಿಸಲಾಗಿತ್ತು.