ಹಳಿ ತಪ್ಪಿದ ಗುವಾಹಟಿ- ಬಿಕಾನೇರ್ ಎಕ್ಸ್‌ಪ್ರೆಸ್ ರೈಲು: ಮೂವರು ಸಾವು, 12 ಬೋಗಿ ಚೆಲ್ಲಾಪಿಲ್ಲಿ

rl pic
Published on

ಕೋಲ್ಕತ್ತಾ: ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಅವಘಡ ಸಂಭವಿಸಿದ ಘಟನೆ ಇಂದು ಸಂಜೆ 5 ಗಂಟೆಯ ಸುಮಾರಿಗೆ ಪ.ಬಂಗಾಳದಲ್ಲಿ ನಡೆದಿದೆ.

ಪ.ಬಂಗಾಳದ ಡೊಮೊಹಾನಿ ಎಂಬಲ್ಲಿ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದ್ದು 12 ಬೋಗಿಗಳು ಚೆಲ್ಲಾಪಿಲ್ಲಿಯಾಗಿವೆ. ಈ ಘಟನೆಯಲ್ಲಿ ಕನಿಷ್ಟ ಮೂರು ಮಂದಿ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ 20 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಘಡದ ಮಾಹಿತಿ ಪಡೆದ ಡಿಆರ್​ಎಂ ಮತ್ತು ಎಡಿಆರ್​ಎಂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net