More

    ನೀರಡಿಯಲ್ಲಿ ಈ ರೀತಿ ಓಡಲಿದೆ ರೈಲು… ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ವಿಡಿಯೋ ಔಟ್

    ಕೋಲ್ಕತ್ತಾ:  ದೇಶದ ಮೊದಲ ಅಂಡರ್ ವಾಟರ್ ಮೆಟ್ರೋವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬುಧವಾರ ಲೋಕಾರ್ಪಣೆ ಮಾಡಿದರು. ಕೋಲ್ಕತ್ತಾದ ನೀರೊಳಗಿನ ಮೆಟ್ರೋವನ್ನು ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗಿದೆ.  ಈ ಮೆಟ್ರೋ ಸುರಂಗವು ಹೌರಾ ಮೈದಾನ-ಎಸ್ಪ್ಲಾನೇಡ್ ವಿಭಾಗದ ನಡುವೆ ಹಾದು ಹೋಗಲಿದ್ದು, ಭಾರತದ ನದಿಯ ಅಡಿಯಲ್ಲಿ ನಿರ್ಮಿಸಲಾದ ಮೊದಲ ಸಾರಿಗೆ ಸುರಂಗವಾಗಿದೆ.

    ಕೆಲವು ದಿನಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೆಟ್ರೋ ರೈಲು ಸೇವೆಗಳನ್ನು ಪರಿಶೀಲಿಸಿದ್ದರು. ಇದೀಗ ಮೋದಿ ಬುಧವಾರ ದೇಶಕ್ಕೆ ಸಮರ್ಪಿಸಿದರು. ನೀರೊಳಗಿನ ಮೆಟ್ರೋವನ್ನು ಹೊರತುಪಡಿಸಿ, ಕವಿ ಸುಭಾಷ್-ಹೇಮಂತ್ ಮುಖೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್ ಮೆಟ್ರೋ ವಿಭಾಗವನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಕೋಲ್ಕತ್ತಾದ ನೀರೊಳಗಿನ ಮೆಟ್ರೋ ಉದ್ಘಾಟನೆಗೂ ಮುನ್ನ ಸುದ್ದಿ ಸಂಸ್ಥೆ ಎಎನ್ಐ ಮೆಟ್ರೋ ಸುರಂಗದ ವಿಡಿಯೋವನ್ನು ಹಂಚಿಕೊಂಡಿದೆ.

    ಈ ನೀರೊಳಗಿನ ಮೆಟ್ರೋ 45 ಸೆಕೆಂಡುಗಳಲ್ಲಿ ಹೂಗ್ಲಿ ನದಿಯ ಅಡಿಯಲ್ಲಿ 520 ಮೀಟರ್ ದೂರವನ್ನು ಕ್ರಮಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಲವು ನೀರೊಳಗಿನ ಮೆಟ್ರೋ ಮಾರ್ಗಗಳು ಪೂರ್ವ-ಪಶ್ಚಿಮ ಕಾರಿಡಾರ್‌ನ (ಗ್ರೀನ್ ಲೈನ್) ಭಾಗವಾಗಿದೆ, ಇದರಲ್ಲಿ ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ಗೆ 4.8 ಕಿಮೀ ಮಾರ್ಗ ಸಿದ್ಧವಾಗಿದೆ. ಇದು 4 ನಿಲ್ದಾಣಗಳನ್ನು ಹೊಂದಿದೆ – ಹೌರಾ ಮೈದಾನ್, ಹೌರಾ ನಿಲ್ದಾಣ, ಮಹಾಕರನ್ ಮತ್ತು ಎಸ್ಪ್ಲಾನೇಡ್. ಹೌರಾ ನಿಲ್ದಾಣವನ್ನು ನೆಲದಿಂದ 30 ಮೀಟರ್ ಕೆಳಗೆ ನಿರ್ಮಿಸಲಾಗಿದೆ. ಇದು ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವಾಗಿದೆ. ಪ್ರಸ್ತುತ, ನೀರೊಳಗಿನ ಮೆಟ್ರೋ ಮಾರ್ಗಗಳನ್ನು ಲಂಡನ್ ಮತ್ತು ಪ್ಯಾರಿಸ್‌ನಲ್ಲಿ ಮಾತ್ರ ನಿರ್ಮಿಸಲಾಗಿದೆ.

    ಪ್ರಾಥಮಿಕ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಟ್ರಂಪ್ ಮತ್ತು ಬೈಡೆನ್; ರೇಸ್‌ನಿಂದ ಹೊರಗುಳಿಯಲಿದ್ದಾರೆ ನಿಕ್ಕಿ ಹ್ಯಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts