100 ಕೋಟಿ ರೂ.ಗೂ ಮಿಗಿಲಾದ ಅಕ್ರಮ ವಹಿವಾಟು ಐಟಿ ದಾಳಿ ವೇಳೆ ಪತ್ತೆ; ಪ್ರಕರಣಕ್ಕಿದೆ ರಾಜಕಾರಣಿಗಳಿಬ್ಬರ ನಂಟು

income tax
Published on

ನವದೆಹಲಿ: ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಲೆಕ್ಕಕ್ಕಿರದ ನೂರು ಕೋಟಿ ರೂ. ಪತ್ತೆಯಾಗಿದೆ. ಅಂದರೆ ನೂರು ಕೋಟಿಗೂ ಅಧಿಕ ಮೊತ್ತದ ವಹಿವಾಟು ಇಲ್ಲವೇ ಹೂಡಿಕೆ ಬೇನಾಮಿ ಆಗಿ ನಡೆದಿರುವುದು ಐಟಿ ದಾಳಿ ವೇಳೆ ಕಂಡುಬಂದಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್​ನ ಕೆಲವೆಡೆ ನ. 4ರಿಂದ ಈ ದಾಳಿ ನಡೆದಿದ್ದು, ಕಲ್ಲಿದ್ದಲು ಉದ್ಯಮ, ಸಾರಿಗೆ, ಸಾರ್ವಜನಿಕ ಗುತ್ತಿಗೆ ಕಾಮಗಾರಿ, ಕಬ್ಬಿಣದ ಗಣಿಗಾರಿಕೆ ಇತ್ಯಾದಿ ಕ್ಷೇತ್ರಕ್ಕೆ ಸೇರಿದ ಪ್ರಕರಣಗಳಲ್ಲಿ ಈ ಮೂತ್ತದ ಅಕ್ರಮ ಪತ್ತೆಯಾಗಿದೆ. ಇಬ್ಬರು ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಹಾಗೂ ಅವರ ಸಂಗಡಿಗರನ್ನು ಒಳಗೊಂಡಂತೆ ಈ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆ ವೇಳೆ ವಿವರಣೆ ಇರದೆ 2 ಕೋಟಿ ರೂ. ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಅಲ್ಲದೆ 16 ಬ್ಯಾಂಕ್​ ಲಾಕರ್​​ಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದುವರೆಗೆ ವಹಿವಾಟು/ಹೂಡಿಕೆ ಸೇರಿ 100 ಕೋಟಿಗೂ ಅಧಿಕ ಮೊತ್ತದ ಅಕ್ರಮ ಎಸಗಿರುವುದು ತಿಳಿದುಬಂದಿದೆ. ಕೋಲ್ಕತ, ಗುರುಗ್ರಾಂ, ಪಾಟ್ನಾ, ಜಾರ್ಖಂಡ್​ನ ರಾಂಚಿ, ಗೊಡ್ಡ, ಬರ್ಮೊ, ದಮ್ಕಾ, ಜಮ್​ಷೆಡ್​ಪುರ, ಚೈಬಾಸ ಸೇರಿ 50 ಅಧಿಕ ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net