ನಾಮಾವಶೇಷಗೊಂಡಿವೆ ಯೂಕ್ರೇನ್​ ಪಾರಂಪರಿಕ ಸ್ಥಳಗಳು: ಯುನೆಸ್ಕೋ ವರದಿ

Un
Published on

ಪ್ಯಾರಿಸ್​: ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ಯೂಕ್ರೇನ್​​ ಸಂಪೂರ್ಣ ಭಸ್ಮವಾಗಿದ್ದು, ಪಾರಂಪರಿಕ ಸ್ಥಾನ ಪಡೆದಿದ್ದ ಹಲವು ಐತಿಹಾಸಿಕ ಸ್ಥಳಗಳು ನಾಮಾವಶೇಷಗೊಂಡಿವೆ ಎಂದು ಯುನೆಸ್ಕೋ ಬುಧವಾರ ತಿಳಿಸಿದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಾರಂಪರೆಯ 100 ಸ್ಥಳಗಳು ಸಂಪೂರ್ಣ ನಾಶವಾಗಿವೆ ಎಂದು ಹೇಳಿದೆ. ಎಂಟು ಧರ್ಮಗಳನ್ನು ಸಾರುವ ಎಲ್ಲಾ ಪಾರಂಪರಿಕ ತಾಣ ಯೂಕ್ರೇನ್​​ನಲ್ಲಿದ್ದವು ಇದೀಗ ಯಾವ ಸ್ಥಳಗಳು ಪಾರಂಪರಿಕ ತಾಣಗಳಾಗಿ ಉಳಿದಿಲ್ಲ ಎಂದಿದೆ.

ಉಪಗ್ರಹಗಳ ಮೂಲಕ ಸಾಕ್ಷ್ಯ ಪಡೆದಿರುವ ಯೂಕ್ರೇನ್​​ ಎಲ್ಲಾ ವರದಿಯನ್ನು ಕಲೆಹಾಕಿದೆ. ಪಾರಂಪರಿಕ ತಾಣಗಳನ್ನು ಉಳಿಸಬೇಕೆಂಬುದರ ಬಗ್ಗೆ ಯುನೆಸ್ಕೋ ಮಾರ್ಚ್​ 17ರಂದೇ ರಷ್ಯಾ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿತ್ತು.

ಫೆ.24ರಿಂದ ನಿರಂತರವಾಗಿ ರಷ್ಯಾ ಯೂಕ್ರೇನ್​ ಮೇಲೆ ಯುದ್ಧ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net