ರಷ್ಯಾದ ಶಸ್ತ್ರಸಜ್ಜಿತ ದೋಣಿ ದ್ವಂಸ: ವಿಡಿಯೋ ಹಂಚಿಕೊಂಡ ಯೂಕ್ರೇನ್​​!

rassia boat
Published on

ಕೀವ್​: ಯೂಕ್ರೇನ್​​ -ರಷ್ಯಾ ನಡುವಿನ ಯುದ್ಧ ಮುಂದುವರಿದಿದ್ದು, ಸದ್ಯ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಪ್ರಬಲ ರಷ್ಯಾ ಹೊಡೆತಕ್ಕೆ ಬಗ್ಗದ ಯೂಕ್ರೇನ್​ ಸರಿಯಾಗಿಯೇ ತಿರುಗೇಟು ನೀಡುತ್ತಿದೆ.

ಸಮುದ್ರದಲ್ಲಿ ರಷ್ಯಾ ನಿಯೋಜಿಸಿದ್ದ ಗಸ್ತು ದೋಣಿಯನ್ನು ಯೂಕ್ರೇನ್​ ಹೊಡೆದುರುಳಿಸಿರುವ ದೃಶ್ಯವನ್ನು ಹಂಚಿಕೊಂಡಿದೆ. ಸ್ನೇಕ್​ ಐಸ್​ಲ್ಯಾಂಡ್​ನ ಕಪ್ಪು ಸಮುದ್ರದಲ್ಲಿ ರಷ್ಯಾ ಗಸ್ತು ದೋಣಿಯನ್ನು ನಿಯೋಜಿಸಿತ್ತು. ಉಪಗ್ರಹ ಮೂಲಕ ಪತ್ತೆ ಹಚ್ಚಿದ್ದ ಯೂಕ್ರೇನ್​ ಕ್ಷಿಪಣಿಯಿಂದ ಹೊಡೆದುರುಳಿಸಿದೆ.

ಶಸ್ತ್ರಾಸ್ತ್ರಗಳ ಜತೆಗೆ 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಈ ದೋಣಿಯನ್ನು ಧ್ವಂಸಗೊಳಿಸಿದ್ದೇವೆ ಎಂದು ಯೂಕ್ರೇನ್​​ ಸೇನಾ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net