ಮೈಸೂರಿನಲ್ಲಿ ಚಿತ್ರೀಕರಣದ ವೇಳೆ ತೆಲುಗು ನಟ ಗೋಪಿಚಂದ್​ಗೆ ಗಾಯ

Gopi chand
Published on

ಹೈದರಾಬಾದ್​: ಚಿತ್ರೀಕರಣದ ವೇಳೆ ನಟ ಗೋಪಿಚಂದ್​ ಗಾಯಗೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಇನ್ನೂ ಹೆಸರಿಡದ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಒಂದು ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ಗೋಪಿಚಂದ್​ ಅವರು ಕಾಲುಜಾರಿ ಗಾಯಗೊಂಡಿದ್ದಾರೆ ಎಂದು ನಿರ್ದೇಶಕ ಶ್ರಿವಾಸ್​ ತಿಳಿಸಿದ್ದಾರೆ.

ಸದ್ಯ ಅವರಿಗೆ ಹೆಚ್ಚೇನು ಗಾಯವಾಗಿಲ್ಲ, ಅವರ ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ. ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ವೇಳೆ ಈ ಘಟನೆಯಾಗಿದೆ. ಸದ್ಯ ನಟ ಗೋಪಿಚಂದ್​ ಅವರಿಗೆ ಏನೂ ಸಮಸ್ಯೆಯಿಲ್ಲ, ಕಾಲಿಗೆ ಸ್ವಲ್ಪ ಪೆಟ್ಟಾಗಿದೆ ಎಂದು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.

2021ರಲ್ಲೇ ಈ ಚಿತ್ರ ಘೊಷಣೆಯಾಗಿತ್ತು. ಕರೊನಾ ಕಾರನದಿಂದಾಗಿ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಏಪ್ರಿಲ್​ 29ರಿಂದ ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂದು ನಿರ್ದೇಶಕ ಶ್ರೀವಾಸ್​ ತಿಳಿಸಿದ್ದಾರೆ. ಗೋಪಿಚಂದ್​ ಜತೆಗೆ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net