More

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಭಾರಿ ಮಳೆ ಬಿರುಗಾಳಿಗೆ ಕೊಚ್ಚಿಹೋದ ಮಾವಿನ ಫಸಲು

    ಕೋಲಾರ: ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ನೂರಾರು ಮಾವಿನ ಮರಗಳು ಧರೆಗುರುಳಿವೆ. ಇನ್ನೇನು ಮಾರುಕಟ್ಟೆಗೆ ಹೊಗಬೇಕಿದ್ದ ಹಣ್ಣುಗಳು ಮಳೆಯಲ್ಲಿ ಹಾಳಾಗಿದ್ದು, ರೈತ ಕಂಗಾಲಾಗುವಂತೆ ಮಾಡಿದೆ.

    ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪುಲಗೂರಕೋಟೆ ಗ್ರಾಮದ ಸುತ್ತಮುತ್ತ ನಿನ್ನೆ ರಾತ್ರಿ ಬಿದ್ದ ಅಕಾಲಿಕ ಮಳೆಗೆ ನೂರಾರು ಮಾವಿನ ಮರಗಳು ಧರೆಗುರುಳಿವೆ. ಇನ್ನು ಹದಿನೈದು ದಿನಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದ ಮಾವಿನ ಕಾಯಿಗಳು ಗಾಳಿಗೆ ನೆಲಕ್ಕುರುಳಿರುವುದರಿಂದ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ.  

    ಇತ್ತೀಚಿಗೆ ಬೀಳುತ್ತಿರುವ ಮಳೆಯಿಂದ ಮಾವು ಸಂಪೂರ್ಣ ನಷ್ಟವಾಗಿದೆ. ಮಾವಿನಿಂದ‌ ಒಂದಿಷ್ಟು ಹಣ ಬರಬಹುದೆಂದುಕೊಂಡಿದ್ದ ರೈತನಿಗೆ ಮಳೆಯಿಂದ ಸಂಕಷ್ಟ ಅನುಭವಿಸಬೇಕಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.

    ಮಧ್ಯರಾತ್ರಿ ಸ್ಪೈಸ್​ಜೆಟ್​ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಏನಾಯ್ತು? ವಿಮಾನಯಾನ ಸಚಿವಾಲಯದಿಂದ ತನಿಖೆಗೆ ಆದೇಶ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts