

ನವದೆಹಲಿ: ಯುನೈಟೆಡ್ ಕಿಂಗ್ಡಮ್ನಲ್ಲಿ ಇದ್ದ 15ನೇ ಶತಮಾನದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಅಲ್ಲಿನ ಅಧಿಕಾರಿಗಳು ಹಿಂತಿರುಗಿಸಿದ್ದಾರೆ ಎಂದು ಸಾಂಸ್ಕೃತಿಕ ಸಚಿವ ಪ್ರಲ್ಹಾದ್ ಸಿಂಗ್ ಪಟೇಲ್ ಅವರು ತಿಳಿಸಿದ್ದಾರೆ.
ತಮಿಳುನಾಡಿನ ದೇವಸ್ಥಾನವೊಂದರಿಂದ 1978ರಲ್ಲಿ ಒಟ್ಟು ಮೂರು ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಇವು 15 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದ್ದವು. ವಿಗ್ರಹಗಳನ್ನು ಕಳವು ಮಾಡಿ ಯುಕೆಗೆ ಸ್ಮಗ್ಲಿಂಗ್ ಮಾಡಲಾಗಿತ್ತು. ಇದೀಗ ಯುಕೆ ಸರ್ಕಾರ ಆ ವಿಗ್ರಹಗಳನ್ನು ಮತ್ತು ಒಂದು ಸ್ತಂಭವನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದಿದ್ದಾರೆ. ಹಾಗೇ ವಿಗ್ರಹ ಹಸ್ತಾಂತರ ಮಾಡಲು ಲಂಡನ್ನ ಭಾರತೀಯ ಹೈಕಮಿಷನ್ ಕೂಡ ತುಂಬ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಈಗಿದೆಲ್ಲ ಕಾಮನ್..ನಾವೂ ಕ್ಯಾಸಿನೋಕ್ಕೆ ಹೋಗಿದ್ವಿ, ಆದ್ರೆ…’ -ನಟ ದಿಗಂತ್ ತಾಯಿ ಹೇಳಿದ್ದು ಹೀಗೆ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ ಈಚೆಗೆ ಒಟ್ಟು 40 ಪ್ರಾಚೀನ ವಿಗ್ರಹಗಳನ್ನು ಸಂಗ್ರಹಿಸಿದೆ. ಇವೆಲ್ಲ ಈ ಹಿಂದೆ ಕಳವಾಗಿ, ಬೇರೆ ದೇಶಗಳಿಗೆ ಕಳ್ಳಸಾಗಣೆ ಆಗಿದ್ದವುಗಳು. ಸ್ವಾತಂತ್ರ್ಯಾನಂತರ 2013ರವರೆಗೆ ಬರೀ 13 ಕಲಾಕೃತಿಗಳು ಮತ್ತು ಪ್ರಾಚೀನವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’
ಹಾಗೇ 20 ವರ್ಷಗಳ ಹಿಂದೆ ರಾಜಸ್ಥಾನದಿಂದ ಕಳವಾಗಿದ್ದ 9ನೇ ಶತಮಾನದ ಶಿವನ ವಿಗ್ರಹವನ್ನು ಆಗಸ್ಟ್ನಲ್ಲಿ ಲಂಡನ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.(ಏಜೆನ್ಸೀಸ್)