ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವೈದ್ಯರು ಶಾಕ್

Baby Birth
Published on

ನವದೆಹಲಿ: ಈ ಜಗತ್ತೇ ಒಂದು ಮಾಯೆ ಎಂದು ಹೇಳಬಹುದಾಗಿದೆ. ಪ್ರಪಂಚದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ವಿಚಿತ್ರ ವಿಸ್ಮಯಕಾರಿ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಅದಕ್ಕೆ ಪೂರಕವೆಂಬಂತೆ ವಿಚಿತ್ರ ಘಟನೆಯೊಂದು ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿದ 22 ದಿನಗಳ ಅಂತರದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿರುವುದು ಈಗ ಚರ್ಚೆಯ ವಿಷಯವಾಗಿದೆ.

ಇಂಗ್ಲೆಂಡ್​ನಲ್ಲಿ ಈ ಘಟನೆ ನಡೆದಿದ್ದು, ಕೈಲಿ ಎಂಬ ಮಹಿಳೆಯು ಸ್ಕ್ಯಾನಿಂಗ್​ ಮಾಡಿಸಿದ ವೇಳೆ ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದು ಕಂಡು ಬಂದಿದೆ. ಸ್ಕ್ಯಾನಿಂಗ್​ ಮಾಡಿಸಿದ ಕೆಲ ದಿನಗಳ ಬಳಿಕ ಆಕೆ ಮೊದಲ ಮಗುವಿಗೆ ಜನ್ಮ ನೀಡಿದ್ದು, ಮಗು ಅದಾಗಲೇ ಸತ್ತಿರುವುದಾಗಿ ವೈದ್ಯೆರು ಘೋಷಿಸಿದ್ದರು. 1.1 ಪೌಂಡ್ ತೂಕವಿರುವ ಈ ಮಗು ಹೊಕ್ಕುಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.

Baby Birth

ಮೊದಲ ಮಗು ಜನಿಸಿದ ಎರಡು ದಿನಗಳಾದರೂ ಹೆರಿಗೆ ನೋವು ಕಾಣಿಸದೇ ಇರುವ ಕಾರಣ ವೈದ್ಯರು ಕೈಲಿಯನ್ನು ಮನೆಗೆ ಕಳುಹಿಸಿದ್ದರು. ಆದರೆ 22 ದಿನಗಳ ಬಳಿಕ ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಅಚ್ಚರಿಯ ಬೆಳವಣಿಗೆ ಕಂಡು ವೈದ್ಯರು ಆಶ್ಚರ್ಯಗೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಮಗುವಿನ ತಾಯಿ ಕೈಲಿ, ಮೊದಲ ಮಗು ಮೃತಪಟ್ಟಿದೆ ಎಂಬ ವಿಚಾರ ತಿಳಿದು ನಾನು ಆಘಾತಕ್ಕೆ ಒಳಗಾಗಿದ್ದೆ. ಪ್ರತಿನಿತ್ಯ ತಪಾಸಣೆ ಮಾಡಿಸುತ್ತಿದ್ದೆ. ಮೊದಲ ಮಗುವಿನ ಹೆರಿಗೆಯಾದ 22 ದಿನಗಳ ಬಳಿಕ ಎರಡನೇ ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿದು ವೈದ್ಯರೇ ಆಶ್ವರ್ಯಪಟ್ಟರು ಎಂದು ಮಗುವಿನ ತಾಯಿ ಕೈಲಿ ಡಾಯ್ಲ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net