

ಲಂಡನ್: ಹಾಸಿಗೆಯಲ್ಲಿ ಸರಸವಾಡುವಾಗ ಬಾಯ್ಫ್ರೆಂಡ್ ಮಾಡಿದ ಒಂದು ಮಿಸ್ಟೇಕ್ನಿಂದ ಯುವತಿ ದುರಂತ ಸಾವಿಗೀಡಾದ ಘಟನೆ ಯುನೈಟೆಡ್ ಕಿಂಗ್‌ಡಮ್ (ಯುಕೆ)ನಲ್ಲಿ ಎರಡು ವರ್ಷಗಳ ಹಿಂದೆಯೇ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಕೊಲೆ ಎಂದು ಹೇಳಿದೆ.
ಮೃತ ಯುವತಿಯನ್ನು ಜಾರ್ಜಿಯಾ ಬ್ರೂಕ್ (26) ಎಂದು ಗುರುತಿಸಲಾಗಿದೆ. ಆಕೆಯ ಗೆಳಯ ಲ್ಯೂಕ್ ಕ್ಯಾನನ್ (31) ಮಾಡಿದ ಮಿಸ್ಟೇಕ್ನಿಂದ ಜಾರ್ಜಿಯಾ ಮೃತಪಟ್ಟಿದ್ದು, ಇದೇ ಕೊರಗಿನಲ್ಲಿ ಲ್ಯೂಕ್ ಕ್ಯಾನನ್ ಕೂಡ ಸಾವಿಗೆ ಶರಣಾಗಿದ್ದಾನೆ. 2022ರ ಫೆಬ್ರವರಿ 3 ರಂದು ಲ್ಯೂಕ್ ಕ್ಯಾನನ್ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಮೊದಲು ಈ ಜೋಡಿ ಜಿಎಚ್ಬಿ ಡ್ರಗ್ಸ್ ತೆಗೆದುಕೊಂಡಿದ್ದರು ಎಂದು ಬ್ರಾಡ್‌ಫೋರ್ಡ್ ಕರೋನರ್ ನ್ಯಾಯಾಲಯವು ಹೇಳಿದೆ.
ಜಾರ್ಜಿಯಾ ಮೃತಪಟ್ಟ ಮರುದಿನ ಆಸ್ಪತ್ರೆಯ ಸಮೀಪವಿರುವ ಕಾಡಿನಲ್ಲಿ ಲ್ಯೂಕ್ ಕ್ಯಾನನ್ ಶವವಾಗಿ ಪತ್ತೆಯಾಗಿದ್ದ. ಗೆಳತಿಯ ಸಾವಿಗೆ ನಾನೇ ಕಾರಣ. ಆಕೆಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಕೊನೆಯುಸಿರೆಳೆದನು. ಈ ಘಟನೆ ನಡೆದ ಎರಡು ವರ್ಷಗಳ ನಂತರ ನ್ಯಾಯಾಲಯ ಇದು ಕೊಲೆ ಎಂದು ತೀರ್ಪು ನೀಡಿದೆ. ಅಂದರೆ ಇದು ಲ್ಯೂಕ್ ಕ್ಯಾನನ್ ತಪ್ಪಿನಿಂದ ಸಂಭವಿಸಿದೆ ಎಂದು ಕೋರ್ಟ್ ತಿಳಿಸಿದೆ.
ಆದರೆ, ಲ್ಯೂಕ್ ಉದ್ದೇಶಪೂರ್ವಕವಾಗಿ ಜಾರ್ಜಿಯಾಳನ್ನು ನೋಯಿಸಲು ಬಯಸಿದ್ದ ಎಂಬುದಕ್ಕೆ ಯಾವುದೇ ಗಾಯಗಳಿಲ್ಲ. ಇನ್ನು ಜಾರ್ಜಿಯಾಳನ್ನು ಪರೀಕ್ಷಿಸಿದ ವೈದ್ಯರು ಆಕೆಯ ಕುತ್ತಿಗೆಯ ಮೇಲಿನ ಒತ್ತಡದಿಂದ ಉಸಿರಾಟ ನಿಂತು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ಜಾರ್ಜಿಯಾಳ ತಾಯಿ ಕೂಡ ಹಾಜರಿದ್ದರು. 2021 ರಲ್ಲಿ ಇಬ್ಬರ ನಡುವೆ ಡೇಟಿಂಗ್ ಪ್ರಾರಂಭವಾದಾಗಿನಿಂದ ಜಾರ್ಜಿಯಾ ಆಯ್ಕೆಗಳನ್ನು ಲ್ಯೂಕ್ ಹೇಗೆ ನಿಯಂತ್ರಿಸುತ್ತಿದ್ದ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಅವಳು ಧರಿಸುವ ಬಟ್ಟೆಯಿಂದಿಡಿದು ಎಲ್ಲದರ ಮೇಲೂ ನಿಯಂತ್ರಣ ಹೇರುತ್ತಿದ್ದ ಎಂದು ಜಾರ್ಜಿಯಾ ತಾಯಿ ನ್ಯಾಯಾಲಯದಲ್ಲಿ ಆರೋಪಿಸಿದ್ದರು. (ಏಜೆನ್ಸೀಸ್)