

ನವದೆಹಲಿ: ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ ನೀಡಿದ್ದಾರೆ.
ಔಪಚಾರಿಕ ದೂರುಗಳ ತನಿಖೆಯ ನಂತರ ಬೆದರಿಸುವ ಆರೋಪಗಳ ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತನ್ನ ವಿರುದ್ಧ ಕಿರುಕುಳ ಆರೋಪದ ಕುರಿತಂತೆ ಅಧಿಕೃತ ದೂರಿನ ನಂತರ ಸ್ವತಂತ್ರ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಬ್ ರಾಜೀನಾಮೆ ನೀಡಿದ್ದಾರೆ. ರಾಬ್ ತಮ್ಮ ರಾಜೀನಾಮೆ ಪತ್ರದಲ್ಲಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ವಿಚಾರಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಬದ್ಧನಾಗಿದ್ದೇನೆ ಎಂದಿದ್ದಾರೆ.
ಪ್ರಧಾನಿ ರಿಷಿ ಸುನಕ್‌ಗೆ ಬರೆದ ಪತ್ರದಲ್ಲಿ, ಈ ವಿಚಾರಣೆಯು ಅಪಾಯಕಾರಿ ನಿದರ್ಶನವನ್ನು ಹೊಂದಿದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಆದರೆ ನಾನು ಈ ಸರ್ಕಾರವನ್ನು ಬೆಂಬಲಿಸುತ್ತೇನೆ. ನಾನು ತನಿಖೆಗೆ ಆಗ್ರಹಿಸಿ ರಾಜೀನಾಮೆ ನೀಡಿದ್ದೇನೆ. ನನ್ನ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ನಾನು ನಂಬುತ್ತೇನೆ ಎಂದು ರಾಬ್ ಹೇಳಿದ್ದಾರೆ.