ಇದುವರೆಗೆ 9 ಮರಿಗಳಿಗೆ ಜನ್ಮ ನೀಡಿದ್ದ ಆನೆ; 10ನೇ ಹೆರಿಗೆ ವೇಳೆ ಮೃತ್ಯು!

ane
Published on

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗರ್ಭಿಣಿ ಆನೆ, ವೈದ್ಯರು ಹಾಗೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ.

ಸುವರ್ಣ (47) ಮೃತಪಟ್ಟ ಆನೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿಯಲ್ಲಿದ್ದ ಸುವರ್ಣ ಆನೆಹತ್ತನೇ ಬಾರಿಗೆ ಗರ್ಭ ಧರಿಸಿತ್ತು. ಈ ಆನೆಗೆ ನಿನ್ನೇಯ ದಿನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಗರ್ಭದಲ್ಲಿಯೇ ಮರಿಯಾನೆ ಸಾವನ್ನಪ್ಪಿತ್ತು. ಗರ್ಭದಲ್ಲಿ ಮೃತಪಟ್ಟ ಮರಿಯಾನೆಯನ್ನ ಹೊರತೆಗೆಯಲು ವೈದ್ಯರ ಹರಸಾಹಸ ಪಟ್ಟಿದ್ದಾರೆ. 150 ಕ್ಕೂ ಹೆಚ್ಚು ತೂಕವಿದ್ದ ಮರಿಯನ್ನ ಆಪರೇಷನ್ ಮಾಡಿ ಹೊರತೆಗೆಯಲಾಗಿದೆ.

ಒಂದು ವಾರಕ್ಕೂ ಹಿಂದೆಯೇ ಗರ್ಭದಲ್ಲಿಯೇ ಮರಿಯಾನೆ ಸಾವನ್ನಪ್ಪಿದೆ. ವೈದ್ಯರ ತಂಡ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸದೆ ಎಡವಟ್ಟು ಮಾಡಿದೆ. ಗರ್ಭಕೋಶ ಹೊಟ್ಟೆಯಲ್ಲಿ ಕೊಳೆತು ಹೋಗಿತ್ತು. ನಿನ್ನೇಯ ದಿನ ಆಪರೇಷನ್ ವೇಳೆ ಸುವರ್ಣ ಆನೆಯ ಗರ್ಭ ಕೊಳೆತಿರುವುದು ಖಾತ್ರಿಯಾಗಿದೆ. ಗರ್ಭದಲ್ಲಿದ್ದ ಮರಿಯನ್ನ ಆಪರೇಷನ್ ಮೂಲಕ ಹೊರತೆಗೆದ ನಂತರ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಆನೆ ಸುವರ್ಣ ಮೃತ ಪಟ್ಟಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹಿರಿಯಾನೆ ಸುವರ್ಣ ಎಲ್ಲಾ ಆನೆಗಳ ರೀತಿಯಂತೆ ಇತ್ತು. ಗರ್ಭಧರಿಸಿದ್ದ ಸುವರ್ಣ ಆನೆಯನ್ನ ಗುಂಪು ಗೂಡಿಸಲಾಗಿತ್ತು. ಇದೂವರೆಗೆ 9 ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ 10 ಬಾರಿಗೆ ಧರಿಸಿದ್ದಳು. ಆನೆ ಗರ್ಭಧರಿಸಿದರು ಕಾಳಜಿ ವಹಿಸಲಿಲ್ವಾ ವೈದ್ಯರು ಹಾಗೂ ಆಡಳಿತ ವರ್ಗ...? ಸುವರ್ಣ ಆನೆಯ ಸಾವಿನಿಂದ ಬನ್ನೇರುಘಟ್ಟದಲ್ಲಿ ಪಾರ್ಕ್ ನಲ್ಲಿ ನಿರವಮೌನ ಆವರಿಸಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಬನ್ನೇರುಘಟ್ಟ ಹಿರಿಯಾನೆ..?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net