More

    ಕಳೆದ ಹದಿನೈದು ವರ್ಷದಿಂದ ಒಂದು ಮನೆ ಬಿಟ್ಟು ಬೇರೆ ಏನೂ ಖರೀದಿ ಮಾಡಿಲ್ಲ : ಡಿಕೆಶಿ

    ಬೆಂಗಳೂರು: ಕಳೆದ ಬಾರಿಯೇ ಷಡ್ಯಂತ್ರ ನಡೆದಿದೆ. ಕಳೆದ ಹದಿನೈದು ವರ್ಷದಿಂದ ಒಂದು ಮನೆ ಬಿಟ್ಟು ಬೇರೆ ಏನೂ ಖರೀದಿ ಮಾಡಿಲ್ಲ. ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ನನಗೂ ಸ್ನೇಹಿತರಿದ್ದಾರೆ. ದೊಡ್ಡ ಪ್ರಯೋಗ ನಡೆಯುತ್ತಿದೆ. ಆದರೆ ಜನರ ತೀರ್ಪಿನ ಬಗ್ಗೆ ನಂಬಿಕೆ ಇದೆ ಎಂದು ಕಾಂಗ್ರೆಸ್​​ ನಾಯಕ ಡಿ.ಕೆ ಶಿವಕುಮಾರ್​​ ಹೇಳಿದ್ದಾರೆ.

    ಯಡಿಯೂರಪ್ಪ ಸರ್ಕಾರ ನನ್ನ ಮೇಲೆ ಮಾತ್ರ ಸಿಬಿಐ ತನಿಖೆಗೆ ಕೊಟ್ಟರು. ಬೇರೆ ಯಾರದ್ದೂ ಕೊಡಲಿಲ್ಲ. ತನಿಖೆಗೆ ಕೊಡಲು ಸರ್ಕಾರದ ಮೇಲೆ ದೆಹಲಿಯವರು ಒತ್ತಾಯ ಮಾಡಿದ್ದರು. ರಾಜಕೀಯ ಸೀನ್‌ನಲ್ಲೇ ಇರದಂತೆ ಮಾಡುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾದಿಂದ ಚೀನಾಕ್ಕೆ 1 ಲಕ್ಷ ಕೋತಿಗಳು ರಫ್ತು ; ಕೋತಿಗಳು ಯಾಕೆ ಬೇಕು ಗೊತ್ತಾ?
    ಸೋನಿಯಾ, ರಾಹುಲ್ ಗಾಂಧಿಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ. ಜನ್ಮ ಜಾಲಾಡುತ್ತಿದ್ದಾರೆ‌. ನಾಮ ಪತ್ರ ತಿರಸ್ಕರಿಸುವ ಕುತಂತ್ರ ಇದೆ‌. ಷಡ್ಯಂತ್ರ ಇದೆ. ನನಗೆ ಯಾರೂ ಅನುಕಂಪವೂ ಬೇಡ ಎಂದು ವಾಗ್ದಾಳಿ ಮಾಡಿದ್ದಾರೆ.

    ಒಂದೇ ದಿನದಲ್ಲಿ ತೀರ್ಮಾನ‌ ಮಾಡಿದರೆ ಏನು ಮಾಡುವುದು “ಡು- ಡೋಂಟ್” “ಅಗ್ರಿ ಡಿಸ್ ಅಗ್ರಿ” ಎಂದು ಒಂದು ಅಧಿಕಾರಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಂಡಿದ್ದೇವೆ. ಅಫಿಡೆವಿಟ್‌ನಲ್ಲಿ ತಪ್ಪಿಲ್ಲ, ಬಿಜೆಪಿಯವರ ಸಾವಿರ ತಪ್ಪು ತೋರಿಸಬಹುದು ಎಂದು ಕಿಡಿಕಾರಿದ್ದಾರೆ.

    ನ್ಯಾಯಾಲಯದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts