ಟಾಯ್ಲೆಟ್​​ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರವೇಶ; ಉಡುಪಿಗೆ ಹೊರಟಿದ್ದೇನೆ ಎಂದ ಖುಷ್​ಬೂ

Khushboo
Published on

ಬೆಂಗಳೂರು: ಉಡುಪಿ ಹಾಸ್ಟೆಲ್​ನ ಟಾಯ್ಲೆಟ್​ನಲ್ಲಿ ಕ್ಯಾಮರಾ ಇಟ್ಟ ಪ್ರಕರಣ ಗಂಭೀರ ಆಗತೊಡಗಿದ್ದು, ಇದಕ್ಕೆ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿದೆ. ಹೀಗಾಗಿ ಈ ಪ್ರಕರಣ ಈಗ ಮತ್ತಷ್ಟು ಗಮನ ಸೆಳೆಯಲಾರಂಭಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್​ಬೂ ಸುಂದರ್​ ಈ ಪ್ರಕರಣದಲ್ಲಿ ಗಮನ ಹರಿಸಿರುವ ಕುರಿತು ಟ್ವೀಟ್​ ಮೂಲಕ ಬಹಿರಂಗಪಡಿಸಿದ್ದಾರೆ. ವಾಶ್​ರೂಮ್​ನಲ್ಲಿ ಸಹಪಾಠಿ ಹುಡುಗಿಯರ ವಿಡಿಯೋ ಮಾಡಲು ಹುಡುಗಿಯರೇ ಕ್ಯಾಮರಾ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯತ್ತ ಹೊರಟಿದ್ದೇನೆ. ಮಕ್ಕಳು ಇಂಥ ಅತಿರೇಕದಲ್ಲಿ ತೊಡಗಿಕೊಳ್ಳುವುದು ಅತ್ಯಂತ ದುಃಖಕರ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನಾನು ಈ ಪ್ರಕರಣದತ್ತ ಗಮನಹರಿಸಿದ್ದು, ವಿದ್ಯಾರ್ಥಿನಿಯರ ಜತೆ ಮಾತುಕತೆ ನಡೆಸಿ, ಪೊಲೀಸರನ್ನು ಭೇಟಿಯಾಗಿ, ಕಾಲೇಜಿಗೂ ಹೋಗಿಬರುತ್ತೇನೆ ಎಂದಿರುವ ಅವರು, ಮಹಿಳೆಯ ಘನತೆಯ ವಿಚಾರದಲ್ಲಿ ಯಾರೂ ಆಟ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net