ನವದೆಹಲಿ: ಟಿವಿಯನ್ನು ವೀಕ್ಷಿಸುವ ಭಂಗಿ ಕೆಲವರದ್ದು ವಿಭಿನ್ನವಾಗಿರುತ್ತದೆ. ಕೆಲವರು ಕುರ್ಚಿಯಲ್ಲಿ ಹಿಂದೆ ಬಾಗಿಕೊಂಡು, ಮತ್ತೆ ಕೆಲವರು ಟೇಬಲ್ ಮೇಲೆ ಕಾಲೇರಿಸಿಕೊಂಡು, ಇನ್ನು ಕೆಲವರು ಮಲಗಿಕೊಂಡು ಟಿವಿ ನೋಡುವುದಿದೆ. ಆದರೆ ಇಲ್ಲೊಬ್ಬಳು ಬಾಲಕಿ ಇವರೆಲ್ಲರಿಗಿಂತ ವಿಚಿತ್ರವಾಗಿ ಟಿವಿ ವೀಕ್ಷಿಸುತ್ತಾಳೆ.
ಸ್ಪೈಡರ್ ಗರ್ಲ್ ಎಂದು ಕರೆಯಲಾಗುವ ಎಂಟು ವರ್ಷದ ಈ ಬಾಲಕಿ ಮನೆಯ ಗೋಡೆ ಮೇಲೆ ಛಾವಣಿಗೆ ತಾಗಿಕೊಂಡಂತೆ ಒರಗಿ ಕುಳಿತು ಟಿವಿ ನೋಡುತ್ತಾಳೆ. ಈಕೆಯ ತಾಯಿ ಮಗಳ ಈ ವಿಚಿತ್ರ ಸಾಹಸದ ವಿಡಿಯೋ ಹಂಚಿಕೊಂಡಿದ್ದು ಇದು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಛಾವಣಿ ಭಾಗದಲ್ಲಿ ಎರಡು ಗೋಡೆಗಳು ಸೇರುವ ಮೂಲೆಯಲ್ಲಿ ಈಕೆ ಕಾಲು ಮಡಚಿ ಕುಳಿತುಕೊಂಡು ಟಿವಿ ನೋಡುವ ದೃಶ್ಯ ನಿಜಕ್ಕೂ ಅಚ್ಚರಿಪಡುವಂತಿದೆ. ಇದಕ್ಕೆ ಆ ಗೋಡೆಗೆ ಹಾಕಲಾದ ಟೈಲ್ಸ್ ಸ್ವಲ್ಪ ಸಹಕಾರಿ ಆಗಿದ್ದರೂ ಇರಬಹುದು ಎಂದು ಕೆಲವರು ಹೇಳಿಕೊಂಡಿದ್ದರೂ ಬಾಲಕಿಯ ಮಟ್ಟಿಗೆ ಇದೊಂಥರ ಸಾಹಸದ ರೀತಿಯಲ್ಲೇ ಕಾಣಿಸುತ್ತಿದೆ.
Check out this video to see an 8-year-old girl climbing to walls to watch TV just like a “spider girl”. #Herstorycn pic.twitter.com/VJwOEtPplC
— China Women’s News (@ChinaWomensNews) July 18, 2023
ಪಾಕ್ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!