ಬಹಿರ್ದೆಸೆಗೆ ಹೋಗಿದ್ದ ಮಹಿಳೆಯರಿಬ್ಬರು ರೈಲಿಗೆ ಸಿಲುಕಿ ಸಾವು

Pub crime
Published on

ಬಳ್ಳಾರಿ: ಬಹಿರ್ದೆಸೆಗೆ ಹೋಗಿದ್ದ ಮಹಿಳೆಯರಿಬ್ಬರು ರೈಲಿಗೆ ಸಿಲುಕಿ ಸಾವಿಗೀಡಾದ ದುರಂತವೊಂದು ಸಂಭವಿಸಿದೆ. ಬಳ್ಳಾರಿ ಜಿಲೆಯಲ್ಲಿ ಇಂಥದ್ದೊಂದು ಅವಘಡ ಉಂಟಾಗಿದೆ.

ಪ್ರಭಾವತಿ (16), ಸ್ವಾತಿ ಎಂಬವರು ಸಾವಿಗೀಡಾದವರು. ಬಳ್ಳಾರಿ ತಾಲೂಕಿನ ತೆಗ್ಗಿನ ಬೂದಿಹಾಳ್ ಗ್ರಾಮದಲ್ಲಿ ಈ ಅವಘಡ ಉಂಟಾಗಿದೆ. ಬಹಿರ್ದೆಸೆಗೆಂದು ತೆರಳಿದ್ದ ಇವರು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಸಾವಿಗೀಡಾದ ಮಹಿಳೆಯರ ಕುರಿತ ಹೆಚ್ಚಿನ ಮಾಹಿತಿ ಇನ್ನೂ ಖಚಿತವಾಗಿ ಹೊರಬಿದ್ದಿಲ್ಲ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಜನರೂ ಜಮಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net