ಎಲ್‌ಪಿಜಿ ಸಿಲಿಂಡರ್ ಸ್ಫೋಟ; ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತ್ಯು!

Untitled design (85)
Published on

ಪಣಜಿ, ಗೋವಾ: ಬೆಳ್ಳಂಬೆಳಗ್ಗೆ ಮನೆಯೊಳಗೆ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡ ಹಿನ್ನೆಲೆ 26 ವರ್ಷದ ಮಹಿಳೆ ಮತ್ತು ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ (ನ.18) ಗೋವಾದ ವಾಸ್ಕೋದಲ್ಲಿ ಸಂಭವಿಸಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಶಿವಾನಿ ರಾಜಾವತ್ ಮತ್ತು ಆಕೆಯ 65 ವರ್ಷದ ಅತ್ತೆ ಜೈದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂದಿನಂತೆ ಇಂದು ಬೆಳಗ್ಗೆ ಕೂಡ ಅಡುಗೆ ಮನೆಗೆ ತೆರಳಿದ ಮಹಿಳೆ, ಅಡುಗೆ ಅನಿಲ ಸಿಲಿಂಡರ್ ಆನ್​ ಮಾಡಲು ಹೋದಾಗ ಅದು ಸ್ಫೋಟಗೊಂಡಿದೆ. ಘಟನೆ ಸಂಭವಿಸಿದ ವೇಳೆ ವಾಸ್ಕೋದ ನ್ಯೂ ವಡ್ಡೆಮ್ ಕಾಲೋನಿಯಲ್ಲಿನ ಮನೆಯಲ್ಲಿ ಇವರಿಬ್ಬರೇ ಮಹಿಳೆಯರು ಇದ್ದರು ಎಂದು ವರದಿಯಾಗಿದೆ.

ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಫೋರೆನ್ಸಿಕ್ ತಜ್ಞರ ತಂಡವು ವಿಶ್ಲೇಷಣೆಗಾಗಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net