ಚಿಂತಾಮಣಿ: ನಗರದ ಮಾಳಪಲ್ಲಿಯ ಆಂಜನೇಯರೆಡ್ಡಿ ಅವರ ಬಹು ಮಹಡಿ ಕಟ್ಟಡದ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಕಳುವಾಗಿವೆ. ಒಂದು ತಿಂಗಳ ಆಂಜಿನೇಯರೆಡ್ಡಿ ಅವರ ಮನೆಯಲ್ಲಿ ಬಾಡಿಗೆಗಿದ್ದು, ಅದೇ ಕಟ್ಟಡದಲ್ಲಿ ಬಾಡಿಗೆಗಿರುವ ಭರತ್ (25), ಶ್ರೀರಾಮರೆಡ್ಡಿ (32)ಇಬ್ಬರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೆವೆ. ಆ.2 ರಂದು ಮಧ್ಯ ರಾತ್ರಿ 11 ಗಂಟೆಗೆ ಅಕ್ಕಪಕ್ಕದಲ್ಲಿ ಎರಡು ವಾಹನ ನಿಲ್ಲಿಸಲಾಗಿತ್ತು. ಆ.3ರಂದು ಬೆಳಗ್ಗೆ ನೋಡಿದಾಗ ಎರಡು ದ್ವಿಚಕ್ರ ವಾಹನ ಕಾಣೆಯಾಗಿವೆ.ಚಿಕ್ಕಬಳ್ಳಾಪುರದ ಯರ್ರನಾಗೇನಹಳ್ಳಿಯ ಶ್ರೀರಾಮರೆಡ್ಡಿ (32) ಆ.5ರಂದು ಚಿಂತಾಮಣಿ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.