ಪಾಕ್‌ನಲ್ಲಿ ಇಬ್ಬರು ಹದಿಹರೆಯದ ಯುವತಿಯರು, ಒಬ್ಬ ಹಿಂದು ಮಹಿಳೆ ಅಪಹರಣ, ಇಸ್ಲಾಂಗೆ ಮತಾಂತರ

Pakisthan Flag
Published on

ಕರಾಚಿ: ಪಾಕಿಸ್ತಾನದಲ್ಲಿ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಕೂಗು ಅನೇಕ ಸಮಯದಿಂದ ಕೇಳಿ ಬರುತ್ತಿದೆ. ಈ ಬೆಳವಣಿಗೆಗೆ ಪುಷ್ಠಿ ನೀಡುವಂತೆ ಪಾಕಿಸ್ತಾನದ ವಿವಿಧ ಭಾಗದಲ್ಲಿ ಮಂತಾತರದ ಮೂರು ಪ್ರಕರಣಗಳು ವರದಿಯಾಗಿವೆ.

ಮೊದಲನೇ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ, ಹಿಂದೂ ಧರ್ಮದ ಒಬ್ಬರು ಮಹಿಳೆ ಮತ್ತು ಇಬ್ಬರು ಹದಿಹರೆಯದ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿದ್ದಾನೆ. ನಂತರ ವಿವಾಹವಾದ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ನಾಸರ್‌ಪುರ ಪ್ರದೇಶದಿಂದ ಮೀನಾ ಮೇಘವಾರ್ (14) ಅವರನ್ನು ಅಪಹರಿಸಲಾಗಿದೆ. ಹದಿಹರೆಯದ ಹಿಂದು ಹುಡುಗಿ ಮಿರ್‌ಪುರ್‌ಖಾಸ್ ಪಟ್ಟಣದ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪಹರಣ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಿರ್ಪುರ್ಖಾಸಿನ್​ನ ಹಿಂದೂ ವಿವಾಹಿತ ಮಹಿಳೆಯೊಬ್ಬರು ಮೂರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂರನೇ ಪ್ರಕರಣದಲ್ಲಿ ತನ್ನ ಪತ್ನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ನೆರೆಯ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದ. ಇದೀಗ ಪತ್ನಿಯನ್ನು ಅಹ್ಮದ್ ಚಾಂಡಿಯೊ ಎಂಬಾತ ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಪತಿ ರವಿ ಕುರ್ಮಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ರಾಕಿ ಎಂಬ ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿ, ಮತಾಂರವಾಗಿರುವುದಾಗಿ ಹೇಳಿದ್ದಾಳೆ. ಮಂತಾತರದ ಬಗ್ಗೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಿರ್ಪುರ್ಖಾಸ್‌ನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್, ಉಮರ್ಕೋಟ್, ಮಿರ್ಫುಖಾನ್, ಘೋಟ್ಕಿ, ಖೈರ್ಪುರಗ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಹಿಂದುಗಳು ವಾಸಿಸುತ್ತಿದ್ದಾರೆ. ಸಿಂಧ್ ಪಾಂತ್ರದ ಈ ಭಾಗದಲ್ಲಿ ಹಿಂದೂ ಹುಡುಗಿಯರ ಅಪಹರಣ ಮತ್ತು ಬಲವಂತದ ಮಂತಾತರ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net