VIDEO: ಕೀಬೋರ್ಡ್​ ಮೂಲಕ 'ಶ್ರೀವಲ್ಲಿ' ಹಾಡು ನುಡಿಸಿದ ಬಾಲಕಿ; ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ

Rashmika Mandana (1)
Published on

ಮುಂಬೈ: ಪುಷ್ಪ ಸಿನಿಮಾ ಬಿಡುಗಡೆಯಾಗಿ ತಿಂಗಳುಗಳು ಕಳೆದರೂ, ಚಿತ್ರದ ಹಾಡಿನ ಕ್ರೇಝ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಜನರು ಮತ್ತೆ ಮತ್ತೆ ಪುಷ್ಪ ಸಿನಿಮಾ ಹಾಡಿನ ರೀಲ್ಸ್, ಡ್ಯಾನ್ಸ್​, ಶಾರ್ಟ್​ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.

ಪುಷ್ಪ ಸಿನೆಮಾದ 'ನೋಟ ಬಂಗಾರವಾಯಿತೇ ಶ್ರೀವಲ್ಲಿ, ಮಾತೆ ಮಾಣಿಕ್ಯ ವಾಯಿತೇ' ಹಾಡು ಇವತ್ತಿಗೂ ಸೋಶಿಯಲ್ ಮೀಡಿಯಾದ ಟ್ರೆಂಡಿಂಗ್​ನಲ್ಲಿದೆ. ಈ ಹಾಡಿನಲ್ಲಿ ನಟ ಅಲ್ಲು ಅರ್ಜುನ್ ಕಾಲನ್ನು ಕುಂಟುತ್ತಾ ಮುಂದೆ ಸಾಗುವುದು ಸಾಕಷ್ಟು ಕ್ರೇಝ್ ಹುಟ್ಟಿಸಿತ್ತು. ಹಲವು ವೇದಿಕೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರಿಂದ ಹಿಡಿದು ಸಣ್ಣ ಸಣ್ಣ ಮಕ್ಳಳು ಕೂಡ ಈ ಹಾಡಿನ ಸ್ಟೆಪ್​ ಹಾಕಿ ಸಂಭ್ರಮಿಸಿದ್ದರು.

ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ಇದೀಗ ಬಹುಭಾಷಾ ನಟಿ. ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಶ್ಮಿಕಾ ಏನೇ ಮಾಡಿದರೂ ಅದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿಬಿಡುವಷ್ಟು ಜನಪ್ರಿಯತೆ ಹೊಂದಿದ್ದಾರೆ. ಇದೀಗ ಪುಟ್ಟ ಬಾಲಕಿಯೊಬ್ಬಳು ಹೆಜ್ಜೆ ಹಾಕುತ್ತಾ ಶ್ರೀವಲ್ಲಿ ಹಾಡನ್ನು ಕೀಬೋರ್ಡ್​ ಮೂಲಕ ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕಿಯ ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಸಾಮಿ ಸಾಮಿ ಹಾಡಿನ ಮೂಲಕ ರಶ್ಮಿಕಾ ಮಂದಣ್ಣ ಜನರನ್ನು ಎಷ್ಟರ ಮಟ್ಟಿಗೆ ತಲುಪಿದ್ದಾರೆ ಎಂಬುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಜನರು ಕಮೆಂಟ್ ಮಾಡಿದ್ದಾರೆ.

ಪುಷ್ಪ ಸಿನಿಮಾದ ಹಾಡುಗಳು ದೇಶದಲ್ಲಿ ದೊಡ್ಡ ಮಟ್ಟದ ಕ್ರೇಝ್ ಹುಟ್ಟಿಸಿತ್ತು. ಇದೀಗ ಜೈಪುರದ ಸೀರೆ ಅಂಗಡಿಯೊಂದರಲ್ಲಿ 'ಶ್ರೀವಲ್ಲಿ' ಹೆಸರಿನ ಸೀರೆ ಮಾರಾಟ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net