

ಕಳಸ: ತಾಲೂಕಿನ ಹಿರೇಬೈಲ್ ಬಳಿ ಶನಿವಾರ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಡಿಗೆರೆ ರಘು ಮತ್ತು ಮಂಜುನಾಥ್ ಗಾಯಾಳುಗಳು. ಮೂಡಿಗೆರೆಯಿಂದ ಕಳಸ ಕಡೆ ಬರುತ್ತಿದ್ದ ಕಾರು, ಶಿರಸಿಯಿಂದ ಪ್ರವಾಸಕ್ಕೆಂದು ಬಂದ ಬಸ್ ಹೊರನಾಡು ದೇವಸ್ಥಾನಕ್ಕೆ ಭೆೇಟಿ ನೀಡಿ ಧರ್ಮಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಹಿರೇಬೈಲಿನ ಬಳಿ ಅಪಘಾತವಾಗಿದೆ. ಕಾರಿನಲ್ಲಿದ್ದ ರಘು ಮತ್ತು ಮಂಜುನಾಥ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.