

ಚಿಕ್ಕಮಗಳೂರು: ಲಾರಿ ಮತ್ತು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಡೂರಿನ ಬಳಿ ನಡೆದಿದೆ.
ಮಲ್ಲಪ್ಪ (57) ಮತ್ತು ಉತ್ಸವ್ (12) ಮೃತರು. ಇವರಿಬ್ಬರೂ ಬೀರೂರಿನ ಬಳಿಗನೂರು ಗ್ರಾಮದವರಾಗಿದ್ದಾರೆ. ಇನ್ನು ಲಾರಿ ಬೈಕ್ಗೆ ಗುದ್ದಿ ನಿಯಂತ್ರಣ ತಪ್ಪಿ ಜೀಪ್ ಮತ್ತು ಅಲ್ಲಿಯೇ ಇದ್ದ ಮರಕ್ಕೆ ಡಿಕ್ಕಿಹೊಡೆದಿದೆ. ಲಾರಿಯ ಮುಂಭಾಗವೂ ಜಖಂ ಆಗಿದೆ.
ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.