ಷಾ ಕಾರ್ಯಕ್ರಮದಲ್ಲಿ ಭಾರಿ ಬದಲಾವಣೆ; ಕೆಂಪೇಗೌಡರ ಜನ್ಮಸ್ಥಳಕ್ಕೆ ಭೇಟಿ ರದ್ದು, ದೇವಾಲಯ ದರ್ಶನವೂ ಕ್ಯಾನ್ಸೆಲ್

Amit Shah Kempegowda
Published on

ದೇವನಹಳ್ಳಿ: ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವರ ಅಮಿತ್ ಷಾ ಅವರ ಕಾರ್ಯಕ್ರಮದಲ್ಲಿ ಭಾರಿ ಬದಲಾವಣೆ ಆಗಿದೆ. ಕೊನೆಯ ಕ್ಷಣದಲ್ಲಿ ಪೂರ್ವ ನಿಗದಿತ ಎರಡು ಪ್ರಮುಖ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ಬೀದರ್​ನಿಂದ ನೇರವಾಗಿ ಆಗಮಿಸಿದ ಅಮಿತ್ ಷಾ ಈ ನಡುವೆ ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳಕ್ಕೆ ಭೇಟಿ ನೀಡುವುದಿತ್ತು. ಹಾಗೆಯೇ ಚಿಕ್ಕಬಳ್ಳಾಪುರದ ಚನ್ನಕೇಶವ ದೇವಾಲಯಕ್ಕೂ ಭೇಟಿ ನೀಡುವುದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಎರಡೂ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ಇದಕ್ಕೆ ಸಮಯದ ಅಭಾವ ಕಾರಣ ಎನ್ನಲಾಗಿದೆ.

ಸದ್ಯ ದೇವನಹಳ್ಳಿಯ ಜೂನಿಯರ್​ ಕಾಲೇಜು ಮೈದಾನದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ನಡೆಯುತ್ತಿದ್ದು, ಅಮಿತ್ ಷಾ ಅದರಲ್ಲಿ ಉಪಸ್ಥಿತರಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಷಾ ನೇರವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದಾರೆ.

ಕೆಂಪೇಗೌಡರ ಜನ್ಮಸ್ಥಳ ಆವತಿ ಗ್ರಾಮಕ್ಕೆ ಬಂದು ಅಲ್ಲಿ ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವುದಿದ್ದು, ಅದು ರದ್ದಾಗಿದೆ. ಷಾ ಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಭಾರಿ ಕಟೌಟ್​-ಬ್ಯಾನರ್​ಗಳನ್ನು ಹಾಕಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ಅನಿವಾರ್ಯವಾಗಿ ರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net