ಪುಲ್ವಾಮಾದಲ್ಲಿ ಇಬ್ಬರು ಜೈಷ್​ ಉಗ್ರ ಸಹಚರರ ಸೆರೆ

Jammu kashmir Police
Published on

ಶ್ರೀನಗರ: ಜೈಷ್​ ಏ ಮೊಹಮ್ಮದ್​ (ಜೆಇಎಂ) ಉಗ್ರರ ಸಹಚರರಿಬ್ಬರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಂಧಿತರನ್ನು ಬಿಲಾಲ್ ಅಹಮದ್ ಚೋಪಾನ್​ ಮತ್ತು ಬಷೀರ್​ ಶೇಖ್​ ಎಂದು ಗುರುತಿಸಲಾಗಿದೆ.

ಬಿಲಾಲ್​ ವಾಗದ್ ತ್ರಾಲ್​ನ ನಿವಾಸಿಯಾದರೆ, ಬಷೀರ್​ ಚಟ್ಲಾಮ್​ ಪ್ಯಾಂಪೋರ್​ ನಿವಾಸಿ. ದಕ್ಷಿಣ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಈ ಇಬ್ಬರ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಅನಿವಾರ್ಯವಾಗಿ ಶರಣಾದರು.

ಪ್ರಾಥಮಿಕ ಮಾಹಿತಿ ಪ್ರಕಾರ, ಬಂಧಿತರು ಉಗ್ರರಿಗೆ ಸರಕು ಸಾಗಣೆ ನೆರವು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸರಬರಾಜು, ಅವರಿಗೆ ವಸತಿ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದರು. ಈ ಎಲ್ಲ ಕಾರ್ಯಾಚರಣೆ ಜಿಲ್ಲೆಯ ಪ್ಯಾಂಪೋರ್ ಮತ್ತು ತ್ರಾಲ್ ಪ್ರದೇಶಕ್ಕೆ ಸೀಮಿತವಾಗಿ ನಡೆಯುತ್ತಿತ್ತು. ಈ ಕುರಿತು ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು, ಭದ್ರತಾ ಪಡೆಗಳು ಮಾಹಿತಿ ಕಲೆಹಾಕುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net