More

    ಎರಡನೇ ದಿನವೂ ಏರಿತು ಪೆಟ್ರೋಲ್​, ಡೀಸೆಲ್​ ಬೆಲೆ!

    ನವದೆಹಲಿ: ಸರಿ ಸುಮಾರು ಎರಡು ತಿಂಗಳ ಕಾಲ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್​ ಬೆಲೆ ನಿನ್ನೆಯಿಂದ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇಂದು ಪೆಟ್ರೋಲ್​ ಬೆಲೆ ಪ್ರತಿ ಲೀಟರ್ ಮೇಲೆ 15 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 20 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಪೆಟ್ರೋಲಿಯಂ ಇಂಧನಗಳ ಬೆಲೆಯಲ್ಲಿ ಸತತ ಎರಡು ದಿನ ಏರಿಕೆ ದಾಖಲಾದಂತಾಗಿದೆ.

    ಬೆಂಗಳೂರಿನಲ್ಲಿ…

    ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 18 ಪೈಸೆ ಹೆಚ್ಚಳವಾಗಿ 84.10 ರೂಪಾಯಿ ಆಗಿದೆ. ಡೀಸೆಲ್ ದರವೂ ಪ್ರತಿ ಲೀಟರಿಗೆ 23 ಪೈಸೆ ಹೆಚ್ಚಾಗಿದ್ದು, ಪ್ರತಿ ಲೀಟರ್ ದರ 75.14 ರೂಪಾಯಿ ಆಗಿದೆ.

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ ಇಂದು 81.38 ರೂಪಾಯಿ ಆಗಿದ್ದು, ನಿನ್ನೆ 81.23 ರೂಪಾಯಿ ಇತ್ತು. ಡೀಸೆಲ್ ದರ 70.68 ರೂಪಾಯಿಯಿಂದ 70.88 ರೂಪಾಯಿಗೆ ಏರಿಕೆಯಾಗಿದೆ. ಶುಕ್ರವಾರ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 17 ಪೈಸೆ, ಡೀಸೆಲ್ ದರ ಪ್ರತಿ ಲೀಟರ್​ಗೆ 22 ಪೈಸೆ ಹೆಚ್ಚಳವಾಗಿತ್ತು.

    ಇದನ್ನೂ ಓದಿ : ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ಪೆಟ್ರೋಲ್ ದರ ಸೆಪ್ಟೆಂಬರ್ 22ರ ನಂತರ ಪರಿಷ್ಕರಣೆ ಆಗಿರಲಿಲ್ಲ. ಅದೇ ರೀತಿ ಡೀಸೆಲ್ ದರದಲ್ಲೂ ಅಕ್ಟೋಬರ್​ 2ರ ನಂತರ ಪರಿಷ್ಕರಣೆ ಆಗಿರಲಿಲ್ಲ. ಇದಕ್ಕೂ ಮೊದಲು ಜೂನ್ 30ರಿಂದ ಆಗಸ್ಟ್ 15ರ ತನಕ ಮತ್ತು ಮಾರ್ಚ್ 17ರಿಂದ ಜೂನ್ 6ರ ತನಕ ತೈಲ ಬೆಲೆ ಯಥಾಸ್ಥಿತಿ ಇತ್ತು. ಮುಂಬೈನಲ್ಲಿ ಶನಿವಾರದ ಪರಿಷ್ಕೃತ ಪೆಟ್ರೋಲ್ ದರ 88.09 ರೂಪಾಯಿ, ಡೀಸೆಲ್​ ದರ 77.34 ರೂಪಾಯಿ ಆಗಿದೆ. ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆಗಳನ್ನಾಧರಿಸಿ ಇಂಧನ ಬೆಲೆ ವ್ಯತ್ಯಾಸವಿದೆ. (ಏಜೆನ್ಸೀಸ್)

    ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts