More

    ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ಬೆಂಗಳೂರು: ನಗರದ ದೊಡ್ಡಪೇಟೆ ವೃತ್ತದ ಬಳಿ ಆ್ಯಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಶುಕ್ರವಾರ ರಾತ್ರಿ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

    ರಾತ್ರಿ ಪಾಳಿ ಗಸ್ತಿನಲ್ಲಿದ್ದ ಪೊಲೀಸರು ವಾಹನ ಪರಿಶೀಲಿಸುತ್ತಿದ್ದರು. ಮಧ್ಯರಾತ್ರಿ 12.30ರ ಸುಮಾರಿಗೆ ಆ್ಯಕ್ಟೀವ್ ಹೊಂಡಾ ದ್ವಿಚಕ್ರ ವಾಹನವನ್ನು ತಡೆದ ಬೀಟ್ ಕಾನ್​ಸ್ಟೇಬಲ್ ಆನಂದ್ ಮತ್ತು ಹನುಮಂತಪ್ಪ ಅವರು ತಪಾಸಣೆ ನಡೆಸುತ್ತಿದ್ದರು. ಗಾಡಿಯಲ್ಲಿದ್ದ ಬ್ಯಾಗ್​ ಬಗ್ಗೆ ಪೊಲೀಸರು ಕೇಳಿದ್ದಕ್ಕೆ, ಅದರಲ್ಲಿ ಶಿವಾಜಿನಗರದ 1 ಗ್ರಾಂ ಗೋಲ್ಡ್ ಇದೆ ಎಂದು ದ್ವಿಚಕ್ರ ವಾಹನ ಸವಾರರು ಹೇಳಿದರು. ಬ್ಯಾಗ್ ತೆರೆದು ನೋಡೋಕೆ ಮುಂದಾದಾಗ 2 ಕೆಜಿ ಚಿನ್ನ ಇದೆ ಬಿಟ್ಟುಬಿಡಿ ಅಂದ್ರು. ಮತ್ತೆ 4 ಕೆಜಿ ಗೋಲ್ಡ್ ಇದೆ ಅಂದ್ರು. ಬ್ಯಾಗ್​ ತೆರೆದು ನೋಡಿದ್ರೆ ಅದರಲ್ಲಿತ್ತು ಒಟ್ಟು 6.55 ಕೆಜಿ ತೂಕದ ನೆಕ್ಲೇಸ್​, ದೊಡ್ಡ ಹಾರ ಸರ, ಬಳೆಗಳು! ಅನುಮಾನಗೊಂಡ ಪೊಲೀಸರು ಚಿನ್ನಾಭರಣದ ದಾಖಲೆ ಕೇಳಿದರು. ಅಷ್ಟರಲ್ಲಿ ಭಾರಿ ಚಿನ್ನದ ಬೇಟೆಗೆ ಪೊಲೀಸರು ಸಜ್ಜಾಗಿದ್ದರು!

    ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣಹೌದು, ದಾಖಲೆ ಇಲ್ಲದೆ ಬರೋಬ್ಬರಿ 6.55 ಕೆಜೆ ಚಿನ್ನಾಭರಣವನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ಯಾಗ್ ಸಹಿತ ಸಿಟಿ ಮಾರ್ಕೆಟ್​ ಠಾಣೆಗೆ ಕರೆತಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

    ಜಪ್ತಿಯಾದ ಆಭರಣಗಳೆಲ್ಲ ಚಿನ್ನದ್ದಾಗಿದ್ದು, ಮುಂಬೈನಲ್ಲಿ ತಯಾರಾಗಿವೆ ಎಂದು ತಿಳಿದುಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಬರುತ್ತಿದ್ದ ಆಭರಣವನ್ನು ಕಲೆಕ್ಟ್​ ಮಾಡಿ ಬ್ಯಾಗ್​ನಲ್ಲಿ ಹಾಕಿಕೊಂಡು ಅಂಗಡಿಗೆ ಹೋಗಿ ಸ್ಯಾಂಪಲ್ ತೋರಿಸುತ್ತಿದ್ದರು. ಅಂಗಡಿಯವರು ಆರ್ಡರ್ ಕೊಟ್ಟರೆ ಮತ್ತೆ ತಯಾರು ಮಾಡಿ ಕೊಡುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ವಿಚಾರಣೆ ವೇಳೆ ನಗರ್ತಪೇಟೆಯ ಎಸ್.ಎಸ್. ಜುವೆಲ್ಲರ್ಸ್​ಗೆ ಸೇರಿದ ಚಿನ್ನಭಾರಣ ಎಂದು ತಿಳಿದುಬಂದಿದ್ದು, ಮುಂಬೈ ಮೂಲದ‌ ದಳಪತ್ ಸಿಂಗ್ ಹಾಗೂ ರಾಜಸ್ತಾನದ ವಿಕಾಸ್ ಎಂಬುವವರ ಬಳಿ ಚಿನ್ನಾಭರಣ ಸಿಕ್ಕಿದೆ. (ದಿಗ್ವಿಜಯ ನ್ಯೂಸ್​)

    ಗಂಡನನ್ನು ತೊರೆದು ಬಂದವಳ ಬದುಕಲ್ಲಿ ದುರಂತ! ಇಷ್ಟಪಟ್ಟು ಮದುವೆಯಾದವನ ಜತೆ ಹೆಣವಾದಳು

    ನ್ಯಾಯ ಬೇಡಿ ಮನೆ ಬಾಗಿಲಿಗೆ ಬಂದ ಶಾಸಕನಿಗೆ ಶಿಸ್ತು ಸಮಿತಿಯತ್ತ ಬೆರಳು ತೋರಿಸಿ ಡಿಕೆಶಿ ಎಸ್ಕೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts