ಪಿಎಫ್​​ಐನ ಟ್ವಿಟರ್, ಫೇಸ್​​ಬುಕ್ ಖಾತೆಗಳೂ ಬಂದ್!

PFI
Published on

ನವ ದೆಹಲಿ: ಕೇಂದ್ರ ಸರ್ಕಾರ ಪಿಎಫ್​ಐ ಸಂಘಟನೆಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿದೆ. ಇದೀಗ ಈ ಸಂಘಟನೆಗಳ ಟ್ವಿಟರ್ ಖಾತೆಯನ್ನು ತಡೆಹಿಡಿಯಲು ನಿರ್ಧರಿಸಿದೆ. ಜತೆಗೆ ಇನ್ಸ್​ಟಾಗ್ರಾಂ ಹಾಗೂ ಫೇಸ್​ಬುಕ್​ ಖಾತೆಗೂ ನಿರ್ಬಂಧ ಹೇರಲಾಗಿದೆ.

ಪಿಎಫ್​​ಐ ಸಂಘಟನೆ @PFIofficial ಹೆಸರಿನಲ್ಲಿ ಟ್ವಿಟರ್ ಖಾತೆಯ ಮೂಲಕ 81,000 ಫಾಲೋವರ್ಸ್​​ಗಳನ್ನು ಹೊಂದಿತ್ತು. ಅಧಿಕೃತ ಖಾತೆಯ ಜೊತೆಗೆ ಸಂಘಟನೆಯ ಅಧ್ಯಕ್ಷ OMA Salam (@oma_salam), ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ (@AnisPFI), ಅವರ ಖಾತೆಯನ್ನು ತಡೆಹಿಡಿಯಲಾಗುತ್ತಿದೆ.

ಕೇಂದ್ರ ಸರ್ಕಾರ ಪಿಎಫ್​ಐನ್ನು ಬ್ಯಾನ್ ಮಾಡಿದ ಒಂದು ದಿನದ ಅಂತರದಲ್ಲಿ, ಅದರ ಸಾಮಾಜಿಕ ಜಾಲತಾಣದ ಖಾತೆಗಳಿಗೂ ನಿರ್ಬಂಧ ವಿಧಿಸುವ ಕೆಲಸ ನಡೆದಿದೆ. ಭಯೋತ್ಪಾದನಾ ಚಟುವಟಿಕೆಗಳ ಜತೆಗೆ ಸಂಬಂಧ ಹೊಂದಿತ್ತು ಎಂಬ ಕಾರಣಕ್ಕೆ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net