ಪರಿಚಯವೇ ಇಲ್ಲದ ಅಜ್ಜಿಗೆ ಹಬ್ಬ ಮಾಡಲು ನೆರವಾದ ಅವಳಿ ಮಕ್ಕಳು!

Untitled-1
Published on

ತಮಿಳುನಾಡು: ಎಪ್ಪತ್ತು ವರ್ಷದ ಈ ಅಜ್ಜಿಗೆ ಇಂದಿನ ಮಕರ ಸಂಕ್ರಮಣವನ್ನು ಸ್ಮರಣೀಯವಾಗಿಸಿದ್ದಾರೆ ಈ ಅವಳಿ ಮಕ್ಕಳು. ವಿಧವೆಯಾಗಿರುವ ಈ ವೃದ್ಧೆಗೆ ಬುದ್ಧಿಮಾಂದ್ಯ ಮಗಳಿದ್ದು, ಹಬ್ಬ ಮಾಡುವುದೇ ಕಷ್ಟ ಎಂಬಂತಿತ್ತು. ಅಂಥ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಪೊಂಗಲ್​ ಪ್ಯಾಕೇಜ್​ ನೆರವಾಗಿ ಬಂದಿತ್ತು. ಆದರೆ ಅದನ್ನು ತರಲು ಹೋಗಿದ್ದ ಈ ವೃದ್ಧೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಳು.

ತಮಿಳುನಾಡಿನಲ್ಲಿ ಬಡವರಿಗೆ ಪೊಂಗಲ್​ ಉಡುಗೊರೆಯಾಗಿ 2,500 ನಗದು , ಕಬ್ಬು, ಬಟ್ಟೆಗಳನ್ನು ಸರ್ಕಾರ ನೀಡುತ್ತಿದೆ. ಆದರೆ ಅದನ್ನು ಪಡೆಯಲು ಎಂದು ನಡೆದೇ ಹೊರಟಿದ್ದ ಸುಬ್ಬುಲಕ್ಷ್ಮೀ ಎಂಬ ವೃದ್ಧೆ ರಸ್ತೆ ಮಧ್ಯದಲ್ಲೇ ಅಸ್ವಸ್ಥಗೊಂಡಿದ್ದಳು. ಆಗ ಅಲ್ಲೇ ಹತ್ತಿರದಲ್ಲಿದ್ದ ವಿ. ವನಿತಾ ಎಂಬವರ ಮನೆ ಬಳಿಗೆ ತೆರಳಿ ಆಶ್ರಯ ಪಡೆದಿದ್ದರು.

ಹಬ್ಬಕ್ಕಾಗಿ ಪೊಂಗಲ್​ ಉಡುಗೊರೆ ಪಡೆಯಲು ಹಾಗೂ ಅದರ ಅಗತ್ಯವನ್ನು ತಿಳಿಸಿದಾಗ, ವನಿತಾಗೆ ಸುಬ್ಬುಲಕ್ಷ್ಮೀ ಬಗ್ಗೆ ಕನಿಕರ ಮೂಡಿದೆ. ನಾನು ಮನೆಯಿಂದ ಅರ್ಧದಾರಿ ಕ್ರಮಿಸಲಿಕ್ಕೇ ಸುಮಾರು ಎರಡು ಗಂಟೆ ಬೇಕಾಯಿತು ಎಂದು ಹೇಳಿದರು. ಆಗ ತಮ್ಮ 9 ವರ್ಷದ ಅವಳಿ ಮಕ್ಕಳಾದ ವಿ.ನಿತಿನ್​ ಹಾಗೂ ವಿ.ನಿತಿಶ್​ ಅವರನ್ನು ಕಳುಹಿಸಿ ಪೊಂಗಲ್ ಪ್ಯಾಕೇಜ್​ ಪೊಟ್ಟಣ ತರಿಸಿಕೊಟ್ಟಿದ್ದಾರೆ. ಬಳಿಕ ಈ ಮಕ್ಕಳು ವೃದ್ಧೆಯನ್ನು ಗಾಡಿಯಲ್ಲಿ ಕೂರಿಸಿಕೊಂಡು ಮನೆಗೂ ಬಿಟ್ಟು ಬಂದಿದ್ದಾರೆ. ಈ ಕುರಿತು ಸ್ಥಳೀಯರು ಮಕ್ಕಳ ಬಗ್ಗೆ ಭಾರಿ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net