ಮದುವೆಯಾದ ತಿಂಗಳಲ್ಲೇ ರೈಲಿನಿಂದ ಪತ್ನಿಯ ನೂಕಿ ಕೊಲೆ- ಮುಂಬೈನಲ್ಲಿ ಅಮಾನುಷ ಘಟನೆ

train
Published on

ಮುಂಬೈ: ಕಳೆದ ತಿಂಗಳಷ್ಟೇ ಮದುವೆಯಾದವನೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿರುವ ಅಮಾನುಷ ಘಟನೆ ಮುಂಬೈನಲ್ಲಿ ನಡೆದಿದೆ.

ಛೇಂಬರ್ ಮತ್ತು ಗೋವಾಂ‌ದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

31 ವರ್ಷದ ಆರೋಪಿ ಮತ್ತು ಮೃತ ಮಹಿಳೆಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲೇ ಮದುವೆಯಾಗಿದ್ದ ಮಹಿಳೆಗೆ 7 ವರ್ಷ ಮಗುವನ್ನು ಹೊಂದಿದ್ದಳು.

27 ವರ್ಷದ ಮಹಿಳೆ ಕೊಲೆಯಾದಳು. ಛೇಂಬರ್ ಮತ್ತು ಗೋವಾಂ‌ದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ.

ಮಹಿಳೆಗೆ ಇದು ಎರಡನೆಯ ಮದುವೆಯಾಗಿತ್ತು. ಇದಾಗಲೇ ಆಕೆಗೆ ಒಂದು ಮಗು ಕೂಡ ಇದೆ. ದಂಪತಿ ನಡುವೆ ಯಾವುದೋ ವಿಷಯಕ್ಕೆ ಗಲಾಟೆಯಾಗಿರಬಹುದು ಎಂದು ಊಹಿಸಲಾಗಿದೆ. ದಂಪತಿ ರೈಲಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆ ರೈಲಿನ ದ್ವಾರದ ಬಳಿ ನಿಂತುಕೊಂಡಿದ್ದಾಳೆ. ಆಕೆಯನ್ನು ಒಳಕ್ಕೆ ಕರೆದುಕೊಳ್ಳುವಂತೆ ಮಾಡಿದ ಪತಿ ನಂತರ ತಳ್ಳಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೂಡಲೇ ಕೆಲವರು ರೈಲನ್ನು ತಡೆದು ನಿಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸುವ ಹೊತ್ತಿಗೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲೇ ಮಹಿಳೆಯು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net