ಕಿರುತೆರೆ ನಟನ ಕಾರು ಅಪಘಾತ

Accident
Published on

ಬೆಂಗಳೂರು: ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸುವ ಯತ್ನದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಭಕ್ಕೆ ಡಿಕ್ಕಿಯಾಗಿ ನಟ ಕಿರಣ್‌ರಾಜ್ ಗಾಯಗೊಂಡಿದ್ದಾರೆ.

ತಾವರೆಕೆರೆ ಸಮೀಪದ ಸಿದ್ದೇಶ್ವರ ಆಶ್ರಮಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಅಲ್ಲಿಂದ ಕಾರಿನಲ್ಲಿ ಕಿರಣ್ ರಾಜ್ ಮನೆಗೆ ರಾತ್ರಿ 9.30ಕ್ಕೆ ಮರಳುತ್ತಿದ್ದಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿತು.

ಘಟನೆಯಲ್ಲಿ ನಟನ ಎದೆ ಭಾಗಕ್ಕೆ ಸ್ಪಲ್ಪ ಪ್ರಮಾಣದ ಗಾಯವಾಗಿದ್ದು, ಕೆಂಗೇರಿ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net