

ದೆಹಲಿ: ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಖದೀಮರು ಬಳಸುವ ತಂತ್ರ ಹಲವು. ಹೊಟ್ಟೆಯಲ್ಲಿ, ಗುದದ್ವಾರದಲ್ಲಿ, ಊಟದ ಡಬ್ಬಿ, ಕಾಲಿಗೆ ಹಾಕಿದ್ದ ಶೂ ಒಳಗೆ, ವಾಟರ್ ಬಾಟಲಿ, ಬ್ಯಾಗ್ನಲ್ಲಿ... ಹೀಗೆ ಹಲವು ಮಾರ್ಗದ ಮೂಲಕ ಯಾರಿಗೂ ಅನುಮಾನ ಬಾರದಂತೆ ಚಿನ್ನ ಸಾಗಟಕ್ಕೆ ಯತ್ನಿಸಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದೀಗ ಮತ್ತೊಬ್ಬ ಗೋಲ್ಡ್ ಸ್ಮಗ್ಲರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ ದುಬೈನಿಂದ ಬರೋಬ್ಬರಿ 505 ಗ್ರಾಂ ತೂಗದ ಚಿನ್ನದ ಬಿಸ್ಕತ್ ತಂದ ವಾಮಮಾರ್ಗದ ಬಗ್ಗೆ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಿ.
ಬ್ಯಾಟರಿ ಬದಲಿಸುವ ಮೊಬೈಲ್ ಫೋನ್‌ನಲ್ಲಿ ಬರೋಬ್ಬರಿ 505 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ತಂದಿದ್ದಾನೆ. ಮೊಬೈಲ್ ಕಳ್ಳನಿಗೂ ಅದರಲ್ಲಿ ಚಿನ್ನ ಇದೆ ಕದಿಯೋಣ ಅನ್ನಿಸಲ್ಲ. ಅಷ್ಟರಮಟ್ಟಿಗೆ ಪ್ಲ್ಯಾನ್ ಮಾಡಿಕೊಂಡು ಆತ ಮೊಬೈಲ್ನಲ್ಲಿ ಚಿನ್ನ ಇಟ್ಟುಕೊಂಡು ಸಾಮಾನ್ಯನಂತೆ ವಿಮಾನದಲ್ಲಿ ಬಂದಿದ್ದಾನೆ.
ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಮೊಬೈಲ್ನಲ್ಲಿ ಚಿನ್ನ ಇರುವುದು ಬಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.