ರುಚಿ ರುಚಿಯಾದ ತರಕಾರಿ ಕಟ್ಲೇಟ್​ ಒಮ್ಮೆ ಟ್ರೈ ಮಾಡಿ! | Recipe

untitled-design-2025-08-30t143807763-68b2bf89ea569
Published on

Recipe: ಇಂದಿನ ದಿನಗಳಲ್ಲಿ ಆಹಾರ ಪ್ರಿಯರು ಹಲವಾರು ರೀತಿಯ ಆಹಾರ ಪದಾರ್ಥಗಳ ಮೇಲೆ ಅವಲಂಬಿತರಾಗಿದ್ದಾರೆ. ಸಂಜೆಯಾದರೆ ಸಾಕು ಏನಾದರೂ ತಿನ್ನಬೇಕೆಂದು ಬಯಸುತ್ತಾರೆ. ಹಾಗೇ ಕೆಲವೊಮ್ಮೆ ಚುರುಮುರಿ, ಪಾನಿಪುರಿ, ಪಿಜ್ಜಾ, ಬರ್ಗರ್​ ಸೇವಿಸುತ್ತಾರೆ. ಇದೆಲ್ಲಾ ತಿಂಡಿ ಸಾಕಾಗಿದಿಯೇ ಹಾಗಿದ್ದರೆ, ಈ ರೀತಿಯ ರುಚಿಯಾದ ತರಕಾರಿ ಕಟ್ಲೇಟ್​ ಮಾಡಿ...

ಬೇಕಾಗುವ ಪದಾರ್ಥಗಳು

* 1 ಸೌತೆಕಾಯಿ

* 1 ಕ್ಯಾರೆಟ್​

* 1 ಎಲೆಕೋಸು

* 1 ಈರುಳ್ಳಿ

* 3 ಚಮಚ ಕಡಲೆಹಿಟ್ಟು

* ಬ್ರೆಡ್​ ತುಂಡುಗಳು

* ಮೆಣಸಿನ ಫ್ಲೇಕ್ಸ್​

* ಉಪ್ಪು

* ಅಕ್ಕಿ ಹಿಟ್ಟು

* ಸ್ವಲ್ಪ ತುಪ್ಪ

ಮಾಡುವ ವಿಧಾನ

ಮೊದಲು ಸೌತೆಕಾಯಿ, ಎಲೆಕೋಸು, ಕ್ಯಾರೆಟ್​ನ್ನು ತುರಿದು ಸೌತೆಕಾಯಿಯ ನೀರು ತೆಗೆಯಿರಿ. ಈಗ ಒಂದು ಪಾತ್ರೆಗೆ ಸೌತೆಕಾಯಿ, ಕ್ಯಾರೆಟ್​, ಈರುಳ್ಳಿ, ಕಡಲೆಹಿಟ್ಟು, ಬ್ರೆಡ್​ ತುಂಡುಗಳು, ಮೆಣಸಿನ ಫ್ಲೇಕ್ಸ್​, ಉಪ್ಪು ಹಾಕಿ ಮಿಕ್ಸ್​ ಮಾಡಿಕೊಂಡು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ, ಅದನ್ನು ಆ ಮಿಶ್ರಣವನ್ನು ಉಂಡೆ ಮಾಡಿಕೊಂಡು ಸಣ್ಣಗೆ ತಟ್ಟಿಕೊಳ್ಳಿ. ನಂತರ ಒಂದು ಹಂಚನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ತಯಾರಿಸಿದ ಕಟ್ಲೇಟ್​ನ್ನು 2 ಬದಿ ಹುರಿಯಿರಿ. ಬಂಗಾರದ ಬಣ್ಣ ಬಂದ ನಂತರ ತೆಗೆಯಿರಿ. ರೆಡಿಮಾಡಿದ ಕಟ್ಲೇಟ್​ನ್ನು ಮೊಸರು ಅಥವಾ ಚಟ್ನಿಯೊಂದಿಗೆ ಸೇವಿಸಿ...(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net