ವಲಸಿಗರನ್ನು ಸಾಗಿಸುತ್ತಿದ್ದ ಹಡಗು ಮುಗುಚಿ ಈವರೆಗೂ 70 ಸಾವು! | accident

untitled-design-2025-08-30t135900746-68b2b661d2e2e
Published on

accident: ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿ ಅಂದಾಜು 150 ವಲಸಿಗರನ್ನು ಕೊಂಡ್ಯುಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಈವರೆಗೂ 70 ಜನರು ಸಾವನ್ನಪ್ಪಿದ್ದಾರೆ ಎಂದು ಗ್ಯಾಂಬಿಯಾದ ವಿದೇಶಾಂಗ ಸಚಿವಾಲಯ ಶುಕ್ರವಾರ (ಆಗಸ್ಟ್​ 29) ಅಧಿಕೃತವಾಗಿ ಘೋಷಿಸಿದೆ.

ಗ್ಯಾಂಬಿಯಾದಿಂದ ಹೊರಟಿದ್ದ ಈ ದೋಣಿಯು ಸೆನೆಗಲ್​ ಹಾಗೂ ಗ್ಯಾಂಬಿಯನ್ ಪ್ರಜೆಗಳನ್ನು ಹೊತ್ತೊಯ್ಯತ್ತಿತ್ತು ಎನ್ನಲಾಗಿದೆ. ಹಡಗು ಮಾರಿಟಾನಿಯ ಕರಾವಳಿಯಲ್ಲಿ ಬುಧವಾರ ಮುಳಗಿದ ನಂತರ ಅಂದಾಜು 30 ಜನಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಈ ಹಡಗು ಅಂದಾಜು 150 ಜನರನ್ನು ಹೊತ್ತೊಯ್ಯುತ್ತಿದ್ದು, ಅವರಲ್ಲಿ 16 ಜನರನ್ನು ರಕ್ಷಿಸಲಾಗಿದೆ. ಹಾಗೇ ಮಾರಿಷನ್​ ಅಧಿಕಾರಿಗಳು ಈವರೆಗೂ 70 ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅಪಘಾತವು ಇತ್ತೀಚಿನ ವರ್ಷಗಳಲ್ಲಿ ಯುರೋಪ್‌ಗೆ ವಲಸೆ ಹೋಗುವ ಈ ಮಾರ್ಗದಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎಂದು ಸುದ್ದಿಯಾಗಿದೆ.

ಅದಾಗ್ಯೂ, ಪಶ್ಚಿಮ ಆಫ್ರಿಕಾದ ಕರಾವಳಿಯಿಂದ ಕ್ಯಾನರಿ ದ್ವೀಪಗಳಿಗೆ ಹೋಗುವ ಅಟ್ಲಾಂಟಿಕ್ ವಲಸೆ ಮಾರ್ಗವನ್ನು ಸಾಮಾನ್ಯವಾಗಿ ಸ್ಪೇನ್​ಗೆ ಪ್ರಯಾಣಿಸಲು ಬಯಸುವ ಆಫ್ರಿಕನ್​ ವಲಸಿಗರು ಬಳಸುತ್ತಾರೆ. ಇದು ವಿಶ್ವದ ಅತ್ಯಂತ ಅಪಾಯ ದಾರಿಯಲ್ಲಿ ಒಂದು ಎಂದು ಹೊರಹೊಮ್ಮಿದೆ.

ಮಾಹಿತಿಯ ಪ್ರಕಾರ, ಈ ಕಠಿಣ ದಾರಿಯಲ್ಲಿ ಕಳೆದ ವರ್ಷ 46,000ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸಿದ್ದು, ಈವರೆಗೂ 10,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಯುರೋಪಿಯನ್​ ಒಕ್ಕೂಟ ದೃಢಪಡಿಸಿದೆ.

ಈ ಘಟನೆ ನಡೆದ ನಂತರ, ಗ್ಯಾಂಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ದಾರಿಯು ಹಲವಾರು ಜನರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದರಿಂದ ಈ ಅಪಾಯಕಾರಿ ಪ್ರಯಾಣಗಳನ್ನು ತೆಗೆದುಕೊಳ್ಳಬೇಡಿ ಎಂದು ತನ್ನ ಪ್ರಜೆಗಳಿಗೆ ಮನವಿ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net