VIDEO| ತಂದೆಯನ್ನೇ ಮಗಳು ವರಿಸಿದ ಪ್ರಕರಣಕ್ಕೆ ಟ್ವಿಸ್ಟ್​; ವೈರಲ್​ ವಿಡಿಯೋದ ಅಸಲಿಯತ್ತು ವಿವರಿಸಿದ ಮಹಿಳೆ

Pak Marriage
Published on

ಲಾಹೋರ್: ಕಳೆದ ವಾರ ಪಾಕಿಸ್ತಾನದಲ್ಲಿ ತಂದೆಯೇ ತನ್ನ ಮಗಳನ್ನು ನಾಲ್ಕನೇ ಮದುವೆಯಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತು ಮತ್ತು ಸಾಕಷ್ಟು ಖಂಡನೆಗೆ ಗುರಿಯಾಗಿತ್ತು.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಹಿಳೆ ರಬಿಯಾ ತಾನು ತನ್ನ ತಂದೆಯನ್ನು ಮದುವೆಯಾಗಿರುವುದು ಸುಳ್ಳು ಸುದ್ದಿ ಮತ್ತು ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾರು ಹಬ್ಬಿಸಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ರಬಿಯಾ ಪಾಕಿಸ್ತಾನದಲ್ಲಿ ಕುಟುಂಬ ಒಂದರಲ್ಲಿ ಜನಿಸುವ ನಾಲ್ಕನೇ ಹೆಣ್ಣು ಮಗುವಿಗೆ ರಬಿಯಾ ಎಂದು ಹೆಸರಿಡುತ್ತಾರೆ. ಈ ಕಾರಣಕ್ಕೆ ಆಕೆಯ ತಂದೆಯೇ ಮಗಳನ್ನು ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ, ನಾನು ಕುಟುಂಬದಲ್ಲಿ ಜನಿಸಿರುವ ಎರಡನೇ ಹೆಣ್ಣು ಮಗಳು. ನನಗೆ ರಬಿಯಾ ಎಂದು ಹೆಸರಿಟ್ಟಿದ್ದಾರೆ.

ಮೊದಲಿಗೆ ನಾನು ಈ ಬಗ್ಗೆ ನನ್ನ ಪೋಷಕರ ಬಳಿ ರಬಿಯಾ ಎಂದು ಯಾಕೆ ಹೆಸರಿಟ್ಟಿರುವುದಾಗಿ ಕೇಳಿದಾಗ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಯಾವಾಗ ಪೋಷಕರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ ನಾನು ಬೇರೊಬ್ಬರಿಗೆ ನಾಲ್ಕನೇ ಪತ್ನಿಯಾಗಿ ಹೋಗುವುದಾಗಿ ಅವರಿಗೆ ಬೆದರಿಸಿದೆ.

ಆದರೆ, ಈ ಮಾತನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದ್ದು, ನಾನು ನನ್ನ ತಂದೆಯನ್ನೇ ಮದುವೆಯಾಗಿದ್ದೇನೆ ಎಂದು ಹಬ್ಬಿಸಲಾಗಿದೆ. ಮುಂದಿನ ದಿನಗಳಲ್ಲಿ ನಾನು ನನ್ನ ಪತಿಯೊಂದಿಗೆ ವಿವಾಹ ಮಾಡಿಕೊಂಡು ಸಂಸಾರ ನಡೆಸುತ್ತಿದ್ದೇನೆ ಎಂದು ಹೇಳಿದರು ಸಹ ಯಾರು ನಂಬುವುದಿಲ್ಲ. ನನ್ನ ಪರಿಸ್ಥಿತಿ ಹಾಗಾಗಿದೆ ಎಂದು ಮಹಿಳೆ ರಬಿಯಾ ನಡೆದ ಘಟನೆ ಕುರಿತು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net