

ಲಖನೌ: ಕಾಡು ಪ್ರಾಣಿಗಳು ಆಹಾರ ಅರಸಿ ಆಗಿಂದಾಗೆ ಕಾಡಿನಿಂದ ನಾಡಿನತ್ತ ಬರುವುದನ್ನು ನೋಡಿದ್ದೇವೆ. ಇದೀಗ ಅಂತಹದೆ ಒಂದು ಪ್ರಕರಣದಲ್ಲಿ ಹುಲಿಯೊಂದು ಹೊಲದಲ್ಲಿ ತಿರುಗಾಡುತ್ತಿದ್ದ ವೇಳೆ ರೈತನೋರ್ವ ಅದರ ಅರಿವಿಲ್ಲದೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿರುವ ಘಟನೆ ಉತ್ತರಪ್ರದೇಶದ ಫಿಲಿಬಿತ್ ಜಿಲ್ಲೆಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ರಾಜ್ ಲಖಾನಿ ಎಂಬುವವರು ಹಂಚಿಕೊಂಡಿದ್ದು, ಭತ್ತದ ಗದ್ದೆಯಲ್ಲಿ ಹುಲಿ ಸುತ್ತಾಡುತ್ತಿರುವುದು ಕಂಡು ಬರುತ್ತದೆ. ಅದರ ಹಿನ್ನಲೆಯಲ್ಲಿ ರೈತ ತನ್ನ ಪಾಡಿಗೆ ತಾನು ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಟ್ವಿಟರ್ನಲ್ಲಿ ಈಗಾಗಲೇ ವಿಡಿಯೋವನ್ನು ಮಿಲಿಯನ್ಗಟ್ಟಲ್ಲೇ ಜನ ವೀಕ್ಷಿಸಿದ್ದು, ಕಾಯಕವೇ ಕೈಲಾಸ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧ ಅಸ್ತಿತ್ವದಲ್ಲಿದೆ ಎಂದು ಬಣ್ಣಿಸಿದ್ದಾರೆ. ನಗಬೇಕೋ ಅಳಬೇಕೋ ಎಂದು ತಿಳಿದಿಲ್ಲ ಇದು ಸಹಬಾಳ್ವೆಯ ಸ್ಪಷ್ಟ ಪ್ರಯತ್ನವನ್ನು ತೋರಿಸುತ್ತದೆ. ಹುಲಿಗೆ ಯಾವುದೇ ಬೇಟೆ ಸಿಗದಿದ್ದಲ್ಲಿ ಈ ರೀತಿ ಹುಲ್ಲು ತಿನ್ನಲು ಬರುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.