ಟ್ರಂಪ್​ ಮತ್ತು ಝೆಲೆನ್ಸ್ಕಿಮಾತುಕತೆ: ವಾಷಿಂಗ್ಟನ್ ಸಭೆಗೆ ಸ್ಟಾರ್ಮರ್​,ಮೆಲೋನಿ ಸೇರಿದಂತೆ ಪ್ರಮುಖ ಯುರೋಪಿಯನ್​ ನಾಯಕರು ಭಾಗಿ| Washington

Trump and Zelenskyy
Published on

Washington: ರಷ್ಯಾದೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಮಾತುಕತೆಗಾಗಿ ಸೋಮವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಹೋಗುತ್ತಿರುವ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರೊಂದಿಗೆ ಯುರೋಪಿಯನ್​ ನಾಯಕರು ಕೈಜೋಡಿಸಲಿದ್ದಾರೆ.

ಸೋಮವಾರ ವಾಷಿಂಗ್ಟನ್, ಡಿಸಿಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗೆ ಯುರೋಪಿನಾದ್ಯಂತದ ನಾಯಕರು ಸೇರಲಿದ್ದು, ಪ್ರಮುಖವಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್,ಫಿನ್ನಿಷ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, NATO ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಸಭೆ ಭಾಗವಹಿಸಲಿದ್ದಾರೆ.

ಭಾನುವಾರದಂದು, ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಡ್ರಿಕ್ ಮೆರ್ಜ್ ಅವರು ಫ್ರಾನ್ಸ್ ನೇತೃತ್ವದ ಒಕ್ಕೂಟದ ವಿಲ್ಲಿಂಗ್ ಸಭೆಯನ್ನು ಆಯೋಜಿಸಿದ್ದರು. ಯುರೋಪಿಯನ್ ಮಿತ್ರರಾಷ್ಟ್ರಗಳು ಶುಕ್ರವಾರ ಅಲಾಸ್ಕಾದಲ್ಲಿ ಟ್ರಂಪ್-ಪುಟಿನ್ ಸಭೆಯ ಕುರಿತು ಚರ್ಚಿಸಲು ವೀಡಿಯೊ ಕರೆಯ ಮೂಲಕ ಭೇಟಿಯಾಗಿದ್ದಾರೆ.

ಅಲ್ಲದೆ, ಬ್ರಿಟಿಷ್​ ಪ್ರಧಾನಿ ಕೀರ್ ಸ್ಟಾರ್ಮರ್ ಈ ಕರೆಗೆ ಸೇರಿಕೊಂಡು ಟ್ರಂಪ್ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಯುಕ್ರೇನ್‌ನಲ್ಲಿ ರಷ್ಯಾದ ಅಕ್ರಮ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷರು ನಮ್ಮನ್ನು ಹಿಂದೆಂದಿಗಿಂತಲೂ ಹತ್ತಿರಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು. ಯುಕ್ರೇನ್‌ಗೆ ಯುರೋಪ್‌ನ ಅಚಲ ಬೆಂಬಲವನ್ನು ಸ್ಟಾರ್ಮರ್ ಪುನರುಚ್ಚರಿಸಿದರು. ಅಲ್ಲದೆ, ಪ್ರಗತಿ ಸಾಧಿಸಲಾಗಿದ್ದರೂ, ಮುಂದಿನ ಹಂತವು ಅಧ್ಯಕ್ಷ ಝೆಲೆನ್ಸ್ಕಿಯನ್ನು ಒಳಗೊಂಡ ಹೆಚ್ಚಿನ ಮಾತುಕತೆಗಳಾಗಿರಬೇಕು ಎಂದು ಸ್ಟಾರ್ಮರ್ ನಂತರ ಅವರ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಕ್ರೇನಿಯನ್ ನಾಯಕ ಕೊನೆಯ ಬಾರಿಗೆ ಅಮೆರಿಕದ ರಾಜಧಾನಿಯಲ್ಲಿದ್ದಾಗ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ನಡೆದ ಮುಖಾಮುಖಿಯನ್ನು ಗಮನದಲ್ಲಿಟ್ಟುಕೊಂಡು, ಯುರೋಪಿನಾದ್ಯಂತ ಮತ್ತು ನ್ಯಾಟೋದಿಂದಲೂ ಹಲವಾರು ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net