

Ravindra Jadeja: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಸ್ಟಾರ್ ಅಲ್ರೌಂಡರ್ ರವೀಂದ್ರ ಜಡೇಜಾರನ್ನು ಜಗತ್ತಿನ ಅತ್ಯುತ್ತಮ ಅಲ್ರೌಂಡರ್ ಎಂದು ಆಸ್ಟ್ರೇಲಿಯಾದ ಬೌಲಿಂಗ್ ದಂತಕಥೆ ಬ್ರೇಟ್ ಲಿ ಹೋಗಳಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಮಾತನಾಡಿರುವ ಲೀ, ಜಡೇಜಾ ಗಾಯಗೊಂಡಿರುವುದನ್ನು ನಾನು ನೋಡಿಲ್ಲ. ಜಡೇಜಾ ಭಾರತಕ್ಕಾಗಿ ಈಗಾಗಲೇ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುತ್ತಾರೆ ಎಂದು ನಾನು ನಂಬುತ್ತೇನೆ. ನನ್ನ ಅಭಿಪ್ರಾಯದಲ್ಲಿ ಪ್ರಕಾರ, ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿದವರು ಸಂಪೂರ್ಣ ಸೂಪರ್‌ಸ್ಟಾರ್ ಆಗುತ್ತಾರೆ.ಅಲ್ಲದೆ, ಸುದೀರ್ಘವಾಗಿ ಅವರ ಆಟ ಉತ್ತುಂಗದಲ್ಲಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಲೀ, ಜಡ್ಡು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಧನೆಗಳ ಹೊರತಾಗಿ, ಅಪ್ರತಿಮ ಫಿಟ್ನೆಸ್ ಮತ್ತು ಕ್ರೀಡಾ ಮನೋಭಾವವನ್ನು ಹೊಂದಿದ್ದಾರೆ. ಜಡೇಜಾ ಭಾರತ ತಂಡದಲ್ಲಿ ಅತ್ಯಂತ ಫಿಟ್ ಆಗಿರುವ ಕ್ರಿಕೆಟಿಗ, ಮೈದಾನದಲ್ಲಿ ಅಗಾಧವಾದ ಆವರಿಸುವ, ತೀಕ್ಷ್ಣವಾದ ರನ್ಔಟ್‌ಗಳನ್ನು ಮಾಡುವ ಮತ್ತು ತಂಡ ಕಷ್ಟದಲ್ಲಿ ಸಿಲುಕಿರುವಾಗ ಉತ್ತಮ ಪ್ರದರ್ಶನ ನೀಡುವ ಆಟಗಾರ ಎಂದು ಲೀ ಬಣ್ಣಿಸಿದ್ಧಾರೆ.
ಒಬ್ಬ ಕ್ರಿಕೆಟಿಗನಿಗೆ ಅಗತ್ಯವಿರುವ ಎಲ್ಲವನ್ನೂ ಜಡೇಜಾ ಹೊಂದಿದ್ದಾರೆ. ಆಟದ ಬಗ್ಗೆ ಉತ್ತಮ ತಂತ್ರವಿದೆ, ಯಾವುದೇ ಗಡಿಬಿಡಿಯಿಲ್ಲ. ಚನ್ನಾಗಿ ಓಡುತ್ತಾರೆ ಮತ್ತು ನಿಖರವಾಗಿ ಬೌಲಿಂಗ್ ಮಾಡುತ್ತಾರೆ. ಅಗತ್ಯವಿದ್ದಾಗ ಸರಿಯಾದ ಲೈನ್ ಮತ್ತು ಲೆಂತ್ನಲ್ಲಿ ಬೌಲ್ ಮಾಡುತ್ತಾರೆ. ತಮ್ಮ ಓವರ್‌ಗಳನ್ನು ಬೇಗನೆ ಮುಗಿಸುತ್ತಾರೆ. 36 ವರ್ಷದಲ್ಲಿಯೂ ವಿಶ್ವದ ಅತ್ಯುತ್ತಮ ಆಟಗಾರ ಮತ್ತು ಅತ್ಯಂತ ಫಿಟ್ ಆಗಿದ್ದಾರೆ ಎಂದು ಲೀ ಹೇಳಿದ್ದಾರೆ.(ಏಜೆನ್ಸೀಸ್)