ಬ್ರೇಕ್​ ಫೇಲ್​ ಆದ ಟ್ರಕ್ ಕ್ರೂಸರ್​ಗೆ ಡಿಕ್ಕಿ; ಸ್ಥಳದಲ್ಲೇ 7 ಜನರು ದುರ್ಮರಣ!

Untitled design - 2023-10-16T085951.856
Published on

ರಾಜಸ್ಥಾನ: ಟ್ರಕ್ ಮತ್ತು ಎಂಯುವಿ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ.

ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ರತನ್‌ಪುರ ಗಡಿಯ ಬಳಿ ಈ ಅಪಘಾತ ಸಂಭವಿಸಿದ್ದು, ಬ್ರೇಕ್​ ಫೇಲ್​ ಆದ ಕಾರಣ ಟ್ರಕ್​ ಜನರನ್ನು ಕರೆದೊಯ್ಯುತ್ತಿದ್ದ ಕ್ರೂಸರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಏಳು ಮಂದಿಯ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು, ತೀವ್ರವಾಗಿ ಗಾಯಗೊಂಡ ಮೂವರನ್ನು ಡುಂಗರ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ, ಟ್ರಕ್​ನ ಬ್ರೇಕ್ ವಿಫಲಗೊಂಡ ನಂತರ 13 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ಫೋರ್ಸ್ ಟ್ರಾಕ್ಸ್ ಕ್ರೂಸರ್ (MUV) ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಾಹನಗಳು ಪಲ್ಟಿಯಾಗಿದೆ.

ಡುಂಗರ್‌ಪುರದಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ವಾಹನದಲ್ಲಿ 21 ಜನರು ಪ್ರಯಾಣಿಸುತ್ತಿದ್ದರು, ಈ ವೇಳೆ ಕೆಲವರು ವಾಹನದ ಛಾವಣಿಯ ಮೇಲೆ ಕುಳಿತಿದ್ದರು ಎಂದು ಹೇಳಲಾಗಿದೆ. ಅಪಘಾತದಲ್ಲಿ ವಾಹನದ ಚಾಲಕ ಕೂಡ ಸಾವನ್ನಪ್ಪಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net