ಉಗ್ರನೆಂದು ಹೇಳಿದ ವಿದ್ಯಾರ್ಥಿಗೆ ಸಂಕಷ್ಟ

KIA
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಲಕ್ನೋಗೆ ತೆರಳಲು ಬಂದಿದ್ದ ಪ್ರಯಾಣಿಕ ನಾನೋಬ್ಬ ಉಗ್ರ ಎಂದು ಬೆದರಿಕೆ ಒಡ್ಡಿದ ಪರಿಣಾಮ ಪೊಲೀಸರು ಬಂಧಿಸಿದ್ದಾರೆ.

ಲಕ್ನೋ ಮೂಲದ ವಿದ್ಯಾರ್ಥಿ ಆದರ್ಶ ಕುಮಾರ್ ಸಿಂಗ್ ಬಂಧಿತ. ಏರ್ ಇಂಡಿಯಾ ವಿಮಾನದಲ್ಲಿ ಲಕ್ನೋಗೆ ಪ್ರಯಾಣ ಬೆಳೆಸಲು ಕೆಐಎಗೆ ಬಂದಿದ್ದ. ನಿಲ್ದಾಣದಲ್ಲಿ ಎಲ್ಲ ತಪಾಷಣೆಗೆ ಒಳಗಾಗಿ ವಿಮಾನದಲ್ಲಿ ಕುಳಿತಿದ್ದ ಆದರ್ಶ ಕುಮಾರ್,ವಿಮಾನ ಟೇಕ್ ಆಗುವ ಸಮಯದಲ್ಲಿ ಸ್ವಯಂ ಪ್ರೇರಿತವಾಗಿ ವಾಪಸ್ ಹೋಗಬೇಕೆಂದು ಕೇಳಿಕೊಂಡಿದ್ದಾನೆ. ಏರ್‌ಲೈನ್ ಸಿಬ್ಬಂದಿ, ತಪಾಸಣೆ ನಡೆಸಿ ವಾಸಪ್ ಕಳುಹಿಸಿದ್ದು, ಹಿಂತಿರುಗಿನ ಆದರ್ಶ ಕುಮಾರ್‌ನನ್ನು ಸಿಐಎಸ್‌ಎ್ ಸಿಬ್ಬಂದಿ ಕಾರಣ ಕೇಳಿದ್ದಾರೆ. ಅದಕ್ಕೆ ಕುಪಿತಗೊಂಡ ಆದರ್ಶ ಕುಮಾರ್, ನಾನು ಭಯೋತ್ಪಾದಕ ಸಂಘಟನೆಗೆ ಸೇರಿದ ಉಗ್ರ. ನಾನು ಲಕ್ನೋಗೆ ಹೋಗುವುದಿಲ್ಲ ಎಂದು ಕೂಗಾಡಿ ರಂಪ ಮಾಡಿದ್ದಾನೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಐಎಸ್‌ಎ್ ಅಧಿಕಾರಿಗಳು, ವಿಮಾನ ನಿಲ್ದಾಣಕ್ಕೆ ಬೆದರಿಕೆ ಆರೋಪದ ಮೇಲೆ ವಶಕ್ಕೆ ಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ಒಪ್ಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ನಡೆಸಿದಾಗ ಮಾನಸಿಕ ಒತ್ತಡದಿಂದ ಹೀಗೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net