ಶೆಡ್​​ಗೆ ದಾಳಿಯಿಟ್ಟು 30 ಕುರಿಮರಿಗಳನ್ನು ಕೊಂದ 20 ಮಂಗಗಳು...

Monkey
Published on

ಹೈದರಾಬಾದ್​: ಸುಮಾರು 30 ಕುರಿಮರಿಗಳನ್ನು 20 ಮಂಗಗಳು ಸೇರಿ ಕೊಂದ ಘಟನೆ ತೆಲಂಗಾಣದ ಸೂರ್ಯಪೇಟ್​​ನಲ್ಲಿ ನಡೆದಿದೆ.

ಇವೆಲ್ಲವೂ ಚಿಂತಲಪಾಲೆಂ ಮಂಡಲದಲ್ಲಿರುವ ಶೋಬಾನಾದ್ರಿಗುಡಂ ಎಂಬ ಹಳ್ಳಿಯ ನಿವಾಸಿಯಾದ ತೊಕಲಾ ಸೈದುಲು ಎಂಬುವರಿಗೆ ಸೇರಿದ್ದಾಗಿದ್ದವು. ಈತ ತನ್ನ ಕುರಿಗಳನ್ನು ಮೇಯಲು ಹಳ್ಳಿಯ ಹೊರವಲಯದಲ್ಲಿರುವ ಹೊಲದಲ್ಲಿ ಬಿಡುತ್ತಿದ್ದ. ಆದರೆ ಮರಿಗಳನ್ನು ಕಳಿಸುತ್ತಿರಲಿಲ್ಲ. ಮನೆಯಲ್ಲಿ ನಿರ್ಮಿಸಿದ ಶೆಡ್​ನಲ್ಲೇ ಇರುತ್ತಿದ್ದವು.

ಹೀಗೆ ಒಂದು ದಿನ ಸೈದುಲು ಕುರಿಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಾಗ, ಇತ್ತ ಸುಮಾರು 20 ಮಂಗಗಳು ಅವನ ಮನೆಯ ಶೆಡ್​​ಗೆ ಲಗ್ಗೆಯಿಟ್ಟು, ಕುರಿಮರಿಗಳ ಮೇಲೆ ದಾಳಿ ಮಾಡಿ, ಕೊಂದು ಹಾಕಿವೆ. ಒಟ್ಟು 30 ಕುರಿಮರಿಗಳು ಕೋತಿಗಳಿಂದಾಗಿ ಪ್ರಾಣಕಳೆದುಕೊಂಡಿವೆ. ಇದನ್ನೂ ಓದಿ: video/ ಸಂಗಾತಿ ಜತೆ ರಮಿಸೋದನ್ನು ಬಿಟ್ಟು ಕೋಳಿ ಜತೆ ಕಾಳಗಕ್ಕಿಳಿದ ಮಯೂರ!

ಅಕ್ಕಪಕ್ಕದ ಮನೆಯವರು ಕೋತಿಗಳನ್ನು ನೋಡಿದ್ದಾರೆ. ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕುರಿಮರಿಗಳ ರಕ್ಷಣೆಗಾಗಿ ಶೆಡ್​ಗೆ ಹೋದರೂ ಕೂಡ ಮಂಗಗಳ ಕ್ರೌರ್ಯ ಮಿತಿಮೀರಿತ್ತು. ಹತ್ತಿರ ಹೋಗಲು ಅವು ಅಸ್ಪದ ಕೊಡಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಇತ್ತೀಚೆಗೆ ಒಂದು ದಿನ ಖಮ್ಮಮ್ ಜಿಲ್ಲೆಯ ಅಮ್ಮಾಪಾಲೆಮ್​ ಗ್ರಾಮದಲ್ಲಿ ಆಹಾರ ಹುಡುಕಿ ಬಂದ ಮಂಗಗಳನ್ನು ನೇಣು ಹಾಕಿ ಕೊಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net